ಮುಂಬೈ: ಕೊರೋನಾದಿಂದಾಗಿ ಇನ್ನು ಮುಂದೆ ಕ್ರಿಕೆಟ್ ನಲ್ಲಿ ಚೆಂಡಿಗೆ ಹೊಳಪು ಮೂಡಿಸಲು ಜೊಲ್ಲು ರಸ ಬಳಕೆ ಮಾಡುವುದನ್ನು ನಿಷೇಧಿಸಿದ ಹೊಸ ನಿಯಮ ಬೌಲರ್ ಗಳಿಗೆ ತಲೆನೋವಾಗಿದೆ.
ಜೊಲ್ಲು ರಸದ ಬದಲು ಬೆವರು ಬಳಸಲು ಸೂಚಿಸಲಾಗಿದೆ. ಆದರೆ ಬೆವರು ಚೆಂಡಿಗೆ ಹೊಳಪು ಮೂಡಿಸಲು ಪರಿಹಾರವಾಗದು. ಅದೂ ಅಲ್ಲದೆ, ಇಷ್ಟು ದಿನ ಅಭ್ಯಾಸವಾಗಿ ಹೋಗಿದ್ದ ವಿಚಾರವನ್ನು ಇದ್ದಕ್ಕಿದ್ದಂತೆ ಬಿಡಬೇಕು ಎಂದರೆ ಕಷ್ಟವೇ.
ಹೀಗಾಗಿ ಐಸಿಸಿ ಕ್ರಿಕೆಟ್ ಸಮಿತಿಯ ಮುಖ್ಯಸ್ಥ ಅನಿಲ್ ಕುಂಬ್ಳೆ ಬೌಲರ್ ಗಳಿಗೆ ಸಮಾಧಾನವಾಗುವ ವಿಚಾರ ಹೇಳಿದ್ದಾರೆ. ಇದು ಮಧ್ಯಂತರ ನಿಯಮವಾಗಿದ್ದು, ಕೊರೋನಾ ಇರುವವರೆಗೆ ಇದನ್ನು ಪಾಲನೆ ಮಾಡಲೇಬೇಕಾಗುತ್ತದೆ. ಅದಾದ ಬಳಿಕ ಎಲ್ಲವೂ ಸಹಜ ಸ್ಥಿತಿಗೆ ಬರಬಹುದು ಎಂದು ಕುಂಬ್ಳೆ ಸಮಜಾಯಿಷಿ ನೀಡಿದ್ದಾರೆ.