ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟಿ20 ಭವಿಷ್ಯದ ಬಗ್ಗೆ ನೂತನ ಆಯ್ಕೆ ಸಮಿತಿ ಅಧ‍್ಯಕ್ಷ ಅಜಿತ್ ಅಗರ್ಕರ್ ಚರ್ಚೆ ನಡೆಸಲಿದ್ದಾರೆ.
ಟಿ20 ಕ್ರಿಕೆಟ್ ಸರಣಿಗಳಲ್ಲಿ ಇತ್ತೀಚೆಗೆ ರೋಹಿತ್, ಕೊಹ್ಲಿಯನ್ನು ಹೊರಗಿಡಲಾಗುತ್ತಿದೆ. ಬದಲಾಗಿ ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ಆಟಗಾರರನ್ನೇ ಕಣಕ್ಕಿಳಿಸಲಾಗುತ್ತಿದೆ. ಹೀಗಾಗಿ ಕೊಹ್ಲಿ, ರೋಹಿತ್ ಮುಂತಾದ ಹಿರಿಯ ಕ್ರಿಕೆಟಿಗರ ಟಿ20 ಕ್ರಿಕೆಟ್ ಭವಿಷ್ಯವೇನು ಎಂಬ ಬಗ್ಗೆ ಪ್ರಶ್ನೆ ಮೂಡಿದೆ.
ಈ ಬಗ್ಗೆ ಗೊಂದಲ ಬಗೆಹರಿಸಲು ಸ್ವತಃ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೊಹ್ಲಿ, ರೋಹಿತ್ ಜೊತೆಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಹಿರಿಯ ಕ್ರಿಕೆಟಿಗರು ಟೆಸ್ಟ್ ಮತ್ತು ಏಕದಿನ ಪಂದ್ಯಗಳ ಕಡೆಗೆ ಗಮನ ಹರಿಸಿ ಎಂದು ಸೂಚನೆ ನೀಡಲಿದ್ದಾರೆ ಎಂದು ವರದಿಯಾಗಿದೆ. ವಿಂಡೀಸ್ ಪ್ರವಾಸ ಮುಕ್ತಾಯವಾದ ಬಳಿಕ ರೋಹಿತ್, ಕೊಹ್ಲಿ ಮತ್ತು ಕೋಚ್ ದ್ರಾವಿಡ್ ಜೊತೆಗೆ ಅಜಿತ್ ಅಗರ್ಕರ್ ಪ್ರತ್ಯೇಕ ಸಭೆ ನಡೆಸಲಿದ್ದಾರೆ.