ಮುಂಬೈ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆಯುತ್ತದೆಂದರೆ ಅದೊಂದು ಯುದ್ಧದ ಹಾಗೆ. ವಿಶ್ವವೇ ಎದುರು ನೋಡುತ್ತಿರುತ್ತದೆ. ಇದೀಗ ಮತ್ತೊಮ್ಮೆ ಅಂತಹದ್ದೇ ಕದನಕ್ಕೆ ವೇದಿಕೆ ಸಿದ್ಧವಾಗಿದೆ.
2018 ಏಷ್ಯಾ ಕಪ್ ವೇಳಾಪಟ್ಟಿ ಸಿದ್ಧವಾಗಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಎದುರಾಗಲಿವೆ. ದುಬೈನಲ್ಲಿ ಈ ಪಂದ್ಯಾವಳಿ ನಡೆಯಲಿದ್ದು ಸೆಪ್ಟೆಂಬರ್ 18 ರಂದು ಟೀಂ ಇಂಡಿಯಾ ದುಬೈನಲ್ಲಿ ಕ್ವಾಲಿಫೈಯರ್ ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ.
ಗ್ರೂಪ್ ಎ ಮತ್ತು ಬಿ ಎಂದು ತಂಡಗಳನ್ನು ವಿಂಗಡಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನ ಗ್ರೂಪ್ ಎಯಲ್ಲಿ ಸ್ಥಾನ ಪಡೆದಿವೆ. ಗ್ರೂಪ್ ಬಿಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳಿವೆ. ಈ ಬಾರಿ ಯುಎಇ, ಸಿಂಗಾಪುರ್, ಒಮನ್, ನೇಪಾಳ, ಮಲೇಷ್ಯಾ ಮತ್ತು ಹಾಂಗ್ ಕಾಂಗ್ ತಂಡಗಳೂ ಏಷ್ಯಾ ಕಪ್ ನಲ್ಲಿ ಆಡಲಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.