`ಕ್ರೀಸ್`ನಲ್ಲಿ ಅಂದುಕೊಂಡದ್ದನ್ನ ಮಾಡಿ ಮುಗಿಸುವ ಶಸ್ತ್ರಚಿಕಿತ್ಸಕ ಕೊಹ್ಲಿ, ಕಠಿಣ ಶ್ರಮ, ತೀವ್ರವಾದ ಫೋಕಸ್, ಗ್ಯಾಪ್`ಗಳಿಗೆ ಚೆಂಡನ್ನ ಹೊಡೆಯುವುದು. ಎಷ್ಟೇ ಒತ್ತಡವಿದ್ದರೂ ತಾಳ್ಮೆಯಿಂದ ಆಟದ ಬಗ್ಗೆ ಗಮನ ಹರಿಸುವುದು. ಸೂಕ್ತ ಸಂದರ್ಭದಲ್ಲಿ ಪಂದ್ಯದ ಗತಿಯನ್ನೇ ಬದಲಿಸುತ್ತಾರೆ ಎಂದು ಬಿಬಿಸಿ ಕಾಲಂನಲ್ಲಿ ಬರೆದಿದ್ದಾರೆ.
`ಕಳೆದ 6 ಐಪಿಎಲ್ ಸೀಸನ್ನಿನಲ್ಲಿ ವಿರಾಟ್ ಕೊಹ್ಲಿ ಆಡಲು ನನಗೆ ಅವಕಾಶ ಸಿಕ್ಕಿದೆ. ವಿಶೇಷವಾದ ಕೌಶಲ್ಯವಷ್ಟೇ ಅಲ್ಲ, ಆಟಕ್ಕೆ ಅತ್ಯಂತ ವೇಗ ಮತ್ತು ಶಕ್ತಿ ತಂದುಕೊಟ್ಟಿದ್ದಾರೆ. ಆಟದ ಬಗ್ಗೆ ಅತೀವ ಶ್ರದ್ಧೆ, ಸ್ವಾಭಾವಿಕ ಕೌಶಲ್ಯ ಅವರಿಗಿದೆ. ನೆಟ್ಸ್`ನಲ್ಲಿ ಬೆವರು ಧಾರಾಕಾರವಾಗಿ ಹರಿಯುತ್ತಿದ್ದರೂ ಬ್ಯಾಟಿಂಗ್`ನ ಎಲ್ಲ ವಿಭಾಗಗಳಲ್ಲೂ ಪರಿಪೂರ್ಣವಾಗುವವರೆಗೂ ಅಭ್ಯಾಸ ನಿಲ್ಲಿಸುವುದಿಲ್ಲ. ಪದೇ ಪದೇ ಪ್ರಾಕ್ಟೀಸ್ ಮಾಡುತ್ತಾರೆ. ಮನಸ್ಸಿಗೆ ತೃಪ್ತಿ ಆಗುವವರೆಗೂ ನೆಟ್ ಬಿಟ್ಟು ಬರುವುದಿಲ್ಲ ಎಂದು ಡಿವಿಲಿಯರ್ಸ್ ಹೊಗಳಿದ್ದಾರೆ.
ಭಾರತದ ಜೆರ್ಸಿ ತೊಡುವುದೆಂದರೆ ಅವರಿಗೆ ಎಲ್ಲಿಲ್ಲದ ಸಂಭ್ರಮ, ದೇಶದ ಪರ ಆಡಲು ಹಾತೊರೆಯುತ್ತಿರುತ್ತಾರೆ. ನನಗಿಂತ 5 ವರ್ಷ ಕಿರಿಯನಾದ ಕೊಹ್ಲಿಯನ್ನ ಎಷ್ಟು ವರ್ಷ ದೇಶದ ಪರ ಆಡುತ್ತೀರಿ ಎಂದು ಕೇಳಿದ್ದಕ್ಕೆ, ಯಾವಾಗಲೂ ಎನ್ನುತ್ತಾ ಮದಸ್ಮಿತರಾದರು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.