Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಾಂಪಿಯನ್ಸ್ ಟ್ರೋಫಿ: ಭಾರತ-ಪಾಕ್ ಪಂದ್ಯಕ್ಕೆ 2000 ಕೋಟಿ ಬೆಟ್ಟಿಂಗ್ ಅಂತೆ..!

ಚಾಂಪಿಯನ್ಸ್ ಟ್ರೋಫಿ: ಭಾರತ-ಪಾಕ್ ಪಂದ್ಯಕ್ಕೆ 2000 ಕೋಟಿ ಬೆಟ್ಟಿಂಗ್ ಅಂತೆ..!
ಬೆಂಗಳೂರು , ಶನಿವಾರ, 17 ಜೂನ್ 2017 (16:35 IST)
ಚಾಂಪಿಯನ್ಸ್ ಟ್ರೋಫಿ ಭಾರತ -ಪಾಕಿಸ್ತಾನದ ಫೈನಲ್ ಪಂದ್ಯದ ಕಾತುರ ರೋಚಕ ಘಟ್ಟ ತಲುಪಿದೆ. ದೇಶಾದ್ಯಂತ 2000 ಕೋಟಿ ರೂ.ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ. 
ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ರೋಚಕ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ್ದು ಯಾವಾಗ ರವಿವಾರ ಬರುತ್ತದೆಯೋ ಯಾವಾಗ ಪಂದ್ಯ ಆರಂಭವಾಗುತ್ತದೆಯೋ ಎನ್ನುವ ನಿರೀಕ್ಷೆ ಹೆಚ್ಚಾಗುತ್ತದೆ.
 
ನಾಳೆ ನಡೆಯಲಿರುವ ಭಾರತ ಮತ್ತು ಪಾಕ್ ವಿರುದ್ಧದ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎನ್ನುವ ಬಗ್ಗೆ ಬೆಟ್ಟಿಂಗ್ ಹಾವಳಿ ಮುಂದುವರಿದಿದೆ. ಕೆಲ ಮೂಲಗಳ ಪ್ರಕಾರ 2000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎಂದು ಹೇಳಲಾಗುತ್ತಿದೆ.
 
ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪಂದ್ಯದಲ್ಲಿ ಎದುರಾಳಿ ಬಾಂಗ್ಲಾದೇಶವನ್ನು ಸೋಲಿಸಿ ಭಾರತ ಫೈನಲ್ ಪ್ರವೇಶಿಸಿದ್ದರೆ, ಇಂಗ್ಲೆಂಡ್ ತಂಡವನ್ನು ಸದೆಬಡೆದ ಪಾಕ್ ಫೈನಲ್‌ಗೆ ಲಗ್ಗೆಯಿಟ್ಟಿದೆ.
 
ಭಾರತ ತಂಡ ಬುಕ್ಕಿಗಳ ಫೆವರೇಟ್ ಆಗಿದ್ದು, ಪಾಕಿಸ್ತಾನದ ಪರ ಬೆಟ್ಟಿಂಗ್‌ನಲ್ಲಿ ಕೊಂಚ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.

 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಚಾಂಪಿಯನ್ಸ್ ಟ್ರೋಫಿಗೆ ಸೋನಿಯಾ ಗಾಂಧಿ ಅಳಿಯ: ವಿವಾದಕ್ಕೀಡಾಯ್ತು ಬಿಸಿಸಿಐ ನಡೆ