ಜಮೈಕಾ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಟೋಗ್ರಾಫ್, ಸೆಲ್ಫೀಗಾಗಿ ಅದೆಷ್ಟು ಮಂದಿ ಹಾತೊರೆಯುವುದಿಲ್ಲ ಹೇಳಿ? ಆದರೆ ಜಮೈಕಾದಲ್ಲಿ ಏಳು ವರ್ಷದ ಬಾಲಕನೊಬ್ಬ ಕೊಹ್ಲಿಗೇ ಚಮಕ್ ಕೊಟ್ಟಿದ್ದಾನೆ.
ಅಭಿಮಾನಿಗಳು ಸೆಲ್ಫೀ, ಆಟೋಗ್ರಾಫ್ ಕೇಳುವುದು ಮಾಮೂಲು. ಆದರೆ ಇದೆಲ್ಲಾ ಮಾಮೂಲು ಎಂದುಕೊಂಡಿದ್ದ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾಗೆ ತಾನೇ ಆಟೋಗ್ರಾಫ್ ನೀಡುವುದಾಗಿ ಏಳು ವರ್ಷದ ಬಾಲಕ ಆಫರ್ ನೀಡಿ ಚಮಕ್ ಕೊಟ್ಟಿರುವ ಘಟನೆ ನಡೆದಿದೆ.
ಅಭಿಮಾನಿಗಳ ನಡುವೆ ಇದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ಏಳು ವರ್ಷದ ಬಾಲಕ ಒಂದು ಚೀಟಿಯಲ್ಲಿ ತನ್ನ ಸಹಿ ಹಾಕಿ ನೀಡಿದ್ದ. ಇದು ವಿರಾಟ್ ದಂಪತಿಗೆ ನಿಜಕ್ಕೂ ಅಚ್ಚರಿಯುಂಟುಮಾಡಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.