ಬೆಂಗಳೂರು: ನಮ್ಮ ಮಧ್ಯೆ ಸಾಮಾನ್ಯವಾಗಿ ಈಗ ಕೇಳಿಬರುವ ಖಾಯಿಲೆಗಳ ಹೆಸರಿನಲ್ಲಿ ಮೊದಲ ಸ್ಥಾನ ಕೊರೋನಾಗೆ, ಎರಡನೆಯದ್ದು ಕ್ಯಾನ್ಸರ್ ಗೆ. ಈ ಎರಡೂ ರೋಗಗಳ ಪರಿಣಾಮವನ್ನು ಕಡಿಮೆ ಮಾಡಬೇಕಾದರೆ ನೀವು ಈ ಒಂದು ಸಣ್ಣ ಕೆಲಸ ಮಾಡಿದರೆ ಸಾಕು ಎಂದು ತಜ್ಞರು ಹೇಳುತ್ತಾರೆ.
ದೇಹದಲ್ಲಿ ವಿಟಮಿನ್ ಡಿ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ವಿಟಮಿನ್ ಡಿ ಅಂಶ ಹೇರಳವಾಗಿ ಸಿಗುವ ಎಳೆ ಬಿಸಿಲಿಗೆ ಮೈಯೊಡ್ಡಬೇಕು. ಪ್ರತಿನಿತ್ಯ ಬಿಸಿಲಿಗೆ ಮೈಯೊಡ್ಡುವುದರಿಂದ ದೇಹದಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗುವುದಲ್ಲದೆ, ಇದು ಕ್ಯಾನ್ಸರ್, ಕೊರೋನಾದಂತಹ ಮಾರಕ ರೋಗಗಳು ನಮ್ಮ ದೇಹದ ಮೇಲೆ ವಿಪರೀತ ಪರಿಣಾಮ ಬೀರುವುದನ್ನು ತಡೆಗಟ್ಟುತ್ತದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಪ್ರತಿನಿತ್ಯ ನೀವು ಕಾಲು ಗಂಟೆಯಾದರೂ ಬಿಸಿಲಿಗೆ ಮೈಯೊಡ್ಡಿ ಕೂರುವುದನ್ನು ಅಭ್ಯಾಸ ಮಾಡಿಕೊಂಡರೆ ಉತ್ತಮ.