ಬೆಂಗಳೂರು: ಕೊರೋನಾ ವಿರುದ್ಧ ಹೋರಾಡುತ್ತಿರುವ ಭಾರತ ಈಗಾಗಲೇ ಮೂರು ಲಾಕ್ ಡೌನ್ ಅವಧಿಗಳನ್ನು ಕಂಡಿದೆ. ಈ ಪೈಕಿ ಯಾವ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಸೋಂಕಿತರು ಹುಟ್ಟಿಕೊಂಡಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಲಾಕ್ ಡೌನ್ 1 ಜಾರಿಯಾಗಿದ್ದು ಮಾರ್ಚ್ 25 ರಿಂದ ಏಪ್ರಿಲ್ 14 ರವರೆಗೆ. ಈ ಲಾಕ್ ಡೌನ್ ಆರಂಭವಾಗುವಾಗ ಸೋಂಕಿತರ ಸಂಖ್ಯೆ 657 ಇತ್ತು. ಮುಕ್ತಾಯದ ವೇಳೆಗೆ ಸೋಂಕಿತರ ಸಂಖ್ಯೆ 11487 ತಲುಪಿತ್ತು. ಅಂದರೆ 10,830 ಹೊಸ ಸೋಂಕಿತರು ಸೇರ್ಪಡೆಯಾಗಿದ್ದರು.
ಲಾಕ್ ಡೌನ್ 2 ಜಾರಿಯಾಗಿದ್ದು ಏಪ್ರಿಲ್ 15 ರಿಂದ ಮೇ 3 ರವರೆಗೆ. ಈ ಅವಧಿ ಆರಂಭವಾಗುವಾಗ ಸೋಂಕಿತರ ಸಂಖ್ಯೆ 12370 ಇತ್ತು. ಮುಕ್ತಾಯದ ವೇಳೆಗೆ 42505 ಆಗಿತ್ತು. ಅಂದರೆ ಈ ಅವಧಿಯಲ್ಲಿ ಒಟ್ಟಾರೆ ಹೊಸದಾಗಿ 30135 ಜನ ಸೋಂಕಿತರಾಗಿದ್ದರು.
ಲಾಕ್ ಡೌನ್ 3 ಆರಂಭವಾಗಿದ್ದು ಮೇ 4 ರಿಂದ 17 ರವರೆಗೆ ಇದು ಮುಂದುವರಿಯಲಿದೆ. ಈಗಾಗಲೇ ಈ ಪೈಕಿ ಎಂಟು ದಿನ ಕಳೆದುಹೋಗಿದೆ. 42643 ಇದ್ದ ಸೋಂಕಿತರ ಸಂಖ್ಯೆ ಈ ಎಂಟು ದಿನದಲ್ಲಿ 70 ಸಾವಿರದ ಗಡಿ ತಲುಪಿದೆ. ಈ ಲಾಕ್ ಡೌನ್ ಅವಧಿ ಮುಗಿಯುವ ವೇಳೆಗೆ ಅದು 1 ಲಕ್ಷ ತಲುಪಿದರೂ ಅಚ್ಚರಿಯಿಲ್ಲ.
ಈ ಅಂಕಿ ಅಂಶ ನೋಡಿದ ಮೇಲಾದರೂ ಕೇವಲ ಲಾಕ್ ಡೌನ್ ಒಂದೇ ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಎಚ್ಚರಿಕೆಯಿಂದಿರುವುದು ಮುಖ್ಯ ಎನ್ನುವುದು ಸ್ಪಷ್ಟವಾಗುತ್ತದೆ.