ಬೆಂಗಳೂರು: ಕೊರೋನಾದಿಂದಾಗಿ ಜನರು ಸಾರ್ವಜನಿಕ ಸೇವೆಗಳನ್ನು ಬಳಸಲೂ ಹಿಂಜರಿಯುತ್ತಿದ್ದಾರೆ. ಬಸ್, ಆಟೋ ಆರಂಭವಾದರೂ ಬಳಕೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ವಾಹನಗಳ ಓಡಾಟವಿರುವುದು ನಿಜ. ಆದರೆ ಹೆಚ್ಚಿನವರು ಓಡಾಟಕ್ಕೆ ತಮ್ಮ ಸ್ವಂತ ವಾಹನ ಬಳಸುತ್ತಿದ್ದಾರೆ. ಆದರೆ ಎಂದಿನಂತೆ ಆಟೋ, ಕ್ಯಾಬ್ ಗಳಲ್ಲಿ ಓಡಾಡಿದರೆ ಎಲ್ಲಿ ವೈರಸ್ ತಗುಲುವುದೋ ಎಂದು ಭಯಪಡುತ್ತಿದ್ದಾರೆ.
ಬಿಎಂಟಿಸಿ, ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭವಾದರೂ ಎಂದಿನಂತೆ ಬಸ್ ನಿಲ್ದಾಣಗಳಲ್ಲಿ ಜನರಿಲ್ಲ. ಹೀಗಾಗಿ ಮೊದಲ ದಿನವೇ ಸಾರಿಗೆ ಸಂಸ್ಥೆ ನಿರಾಸೆ ಅನುಭವಿಸಿತ್ತು. ಹೀಗಾಗಿ ಎರಡನೇ ದಿನ ಸ್ಯಾನಿಟೈಸರ್, ಸುರಕ್ಷಿತಾ ವ್ಯವಸ್ಥೆಗಳ ಮೂಲಕ ಜನರ ಗಮನ ಸೆಳೆಯಲು ಪ್ರಯತ್ನಿಸಿದೆ. ಬಹುಶಃ ಸಂಚಾರ ಮಾಡಲು ಜನರಿಗೆ ನಂಬಿಕೆ ಬರಬೇಕೆಂದರೆ ಇನ್ನೂ ಒಂದು ವಾರ ಕಳೆಯಬೇಕಾಗಬಹುದೇನೋ.