ದೆಹಲಿ : ಇಡೀ ವಿಶ್ವವೇ ಕೋವಿಡ್-19 ವೈರಸ್ನಿಂದ ಸ್ವಲ್ಪ ಮಟ್ಟಿಗೆ ವೈರಸ್ ನ ಬೇರೆ ಬೇರೆ ಅಲೆಗಳಿಂದ ಚೇತರಿಸಿಕೊಳ್ಳುವ ಮೊದಲೇ ಹೊಸದಾಗಿ ವೈರಸ್ಗಳು ಹುಟ್ಟಿಕೊಳ್ಳುತ್ತಿದ್ದು, ಅವುಗಳ ವಿರುದ್ಧ ಹೋರಾಡುವುದು ಹೊಸ ತಲೆನೋವು ಶುರುವಾದಂತೆ ಆಗಿದೆ.
ಈಗ ಹೊಸದಾಗಿ ಕೋವಿಡ್-19 ವೈರಸ್ ನಿಂದ ಚೇತರಿಸಿಕೊಂಡವರಲ್ಲಿ ಸೈಟೋಮೆಗಾಲೋ ವೈರಸ್ (ಸಿಎಂವಿ) ಕಾಣಿಸಿಕೊಳ್ಳುತ್ತಿರುವಂತಹ ಘಟನೆಗಳು ಬೆಳಕಿಗೆ ಬಂದಿವೆ. ಸಿಎಂವಿಯು ಡಬಲ್ ಸ್ಟ್ರಾಂಡೆಡ್ ಡಿಎನ್ಎ ವೈರಸ್ ಆಗಿದ್ದು, ಇದು ಹ್ಯುಮನ್ ಹರ್ಪಸ್ ವೈರಸ್ ಕುಟುಂಬಕ್ಕೆ ಸೇರಿದ ವೈರಸ್ ಆಗಿದೆ.
ಸುಮಾರು ಐದು ಜನರು ಇತ್ತೀಚೆಗೆ ಕೋವಿಡ್-19 ವೈರಸ್ ನಿಂದ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದು ಅವರೆಲ್ಲರೂ ಕೊರೊನಾ ದಿಂದ ಚೇತರಿಸಿಕೊಳ್ಳುವಷ್ಟರಲ್ಲಿಯೇ ಇನ್ನೊಂದು ಹೊಸ ಸಮಸ್ಯೆಯೊಂದು ಅವರನ್ನು ಕಾಡಲು ಶುರುವಾಗಿದೆ. ಅವರಲ್ಲೀಗ ಗುದನಾಳದಲ್ಲಿ ರಕ್ತಸ್ರಾವ ಉಂಟಾಗಿದ್ದು ಅದನ್ನು ವೈದ್ಯರು ಸಿಎಂವಿ ಸೋಂಕಿನಿಂದ ಆಗಿದ್ದು ಅಥವಾಸೈಟೋಮೆಗಾಲೋ ವೈರಸ್ ತಗುಲಿದೆ ಎಂದು ಹೇಳುತ್ತಿದ್ದಾರೆ. ಈ ಐವರಲ್ಲಿ ಒಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.