ಬೆಂಗಳೂರು: ಕೊರೋನಾದಿಂದ ಗುಣ ಮುಖರಾದ ಬಳಿಕ ಮನೆಗೆ ಮರಳಿದ ಮೇಲೂ ಇದುವರೆಗೆ 14 ದಿನಗಳ ಕಾಲ ಕ್ವಾರಂಟೈನ್ ಆಗಿರಲು ಸಲಹೆ ನೀಡಲಾಗುತ್ತಿತ್ತು. ಆದರೆ ಇನ್ನು ಈ ಅವಧಿ ಏಳು ದಿನಗಳಿಗೆ ಕಡಿತವಾಗಲಿದೆ.
ಹೋಂ ಐಸೋಲೇಷನ್ ಬಗ್ಗೆ ಹೊಸ ನಿಯಮ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇನ್ನು ಏಳು ದಿನ ಕ್ವಾರಂಟೈನ್ ಆಗಿದ್ದರೆ ಸಾಕು ಎಂದು ಸೂಚನೆ ನೀಡಿದೆ.
ಅಲ್ಪ ಪ್ರಮಾಣದಲ್ಲಿ ಸೋಂಕಿನಿಂದ ಬಳಲುತ್ತಿದ್ದು, ಗುಣಮುಖರಾದ ಬಳಿಕ ಏಳು ದಿನ ಕ್ವಾರಂಟೈನ್ ಆಗಿದ್ದರೆ ಸಾಕು. ಅಷ್ಟೇ ಅಲ್ಲದೆ ಕಡಿಮೆ ಲಕ್ಷಣ ಅಥವಾ ಲಕ್ಷಣವೇ ಇಲ್ಲದೇ ಸೋಂಕಿಗೊಳಗಾದವರು ಆಸ್ಪತ್ರೆಯಿಂದ ಬಿಡುಗಡೆಯಾಗಲು 10 ದಿನಗಳ ಗಡುವು ವಿಧಿಸಿದೆ. ಬಿಡುಗಡೆ ಹಂತದಲ್ಲಿ ಸೋಂಕು ಪರೀಕ್ಷಿಸಿಕೊಳ್ಳಬೇಕಾಗಿಲ್ಲ. ಲಕ್ಷಣಗಳು ಕಂಡುಬಂದರೆ ಸಮೀಪದ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದರೆ ಸಾಕು. ಬಿಡುಗಡೆಗೂ ಮುನ್ನ ಮೂರು ದಿನ ಮುಂಚಿತವಾಗಿ ಲಕ್ಷಣಗಳಿಲ್ಲದೇ ಹೋದರೆ ಆಸ್ಪತ್ರೆಯಿಂದ ಮನೆಗೆ ತೆರಳಬಹುದು ಎಂಬಿತ್ಯಾದಿ ಹೊಸ ನಿಯಮಗಳನ್ನು ಮಾಡಲಾಗಿದೆ.