Publish Date: Sat, 01 Aug 2020 (09:51 IST)
Updated Date: Sat, 01 Aug 2020 (09:53 IST)
ಬೆಂಗಳೂರು: ಸಚಿವ ಬಿಸಿ ಪಾಟೀಲ್ ಗೆ ಕೊರೋನಾ ಸೋಂಕು ತಗುಲಿರುವುದು ಖಚಿತವಾಗಿದೆ. ಈ ವಿಚಾರವನ್ನು ಅವರೇ ಟ್ವಿಟರ್ ಮೂಲಕ ದೃಢಪಡಿಸಿದ್ದಾರೆ.
ಇತ್ತೀಚೆಗಷ್ಟೇ ಕೊಪ್ಪಳಕ್ಕೆ ಭೇಟಿ ನೀಡಿದಾಗ ತಮ್ಮ ಜತೆಗಿದ್ದ ಅಧಿಕಾರಿಗಳಿಗೆ ಕೊರೋನಾ ತಗುಲಿತ್ತು. ಹೀಗಾಗಿ ತಾವೂ ಟೆಸ್ಟ್ ಗೆ ಒಳಗಾಗಿದ್ದು, ವರದಿ ಪಾಸಿಟಿವ್ ಬಂದಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.
ಇದೀಗ ಬಿಸಿ ಪಾಟೀಲ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಗೊಳಗಾಗಿದ್ದಾರೆ. ಕೆಲವು ದಿನಗಳ ಮೊದಲು ಬಿಸಿ ಪಾಟೀಲ್ ಸುರಕ್ಷತೆಯ ಕಾರಣಕ್ಕೆ ಕ್ವಾರಂಟೈನ್ ಗೊಳಗಾಗಿದ್ದರು.