Publish Date: Wed, 15 Jul 2020 (08:43 IST)
Updated Date: Wed, 15 Jul 2020 (08:45 IST)
ಬೆಂಗಳೂರು: ನಿನ್ನೆ ರಾತ್ರಿಯಿಂದ ಒಂದು ವಾರ ಕಾಲ ಬೆಂಗಳೂರಿನಲ್ಲಿ ಲಾಕ್ ಡೌನ್ ಆರಂಭವಾಗಿದೆ. ಆದರೆ ಲಾಕ್ ಡೌನ್ ಅಭ್ಯಾಸವಾಗಿ ಹೋಗಿದೆ ಎಂದು ಉಡಾಫೆಯಿಂದ ಅನಗತ್ಯವಾಗಿ ಹೊರಗೆ ತಿರುಗಾಡಿದರೆ ಅಪಾಯ ನಿಮಗೇ ಎನ್ನುವುದನ್ನು ಮರೆಯಬೇಡಿ.
ಸರ್ಕಾರವೇನೋ ಈಗ ಕೇವಲ ಒಂದೇ ವಾರದ ಮಟ್ಟಿಗೆ ಲಾಕ್ ಡೌನ್ ಎಂದು ಘೋಷಣೆ ಮಾಡಿದೆ. ಒಂದು ವೇಳೆ ಇದನ್ನು ಉಲ್ಲಂಘಿಸಿ ಬೇಕಾಬಿಟ್ಟಿ ಇದ್ದರೆ ಅನಿವಾರ್ಯವಾಗಿ ಈ ತಿಂಗಳ ಅಂತ್ಯದವರೆಗೂ ಲಾಕ್ ಡೌನ್ ವಿಸ್ತರಣೆ ಮಾಡುತ್ತಾ ಬಂದರೂ ಅಚ್ಚರಿಯಿಲ್ಲ.
ಹೀಗಾಗಿ ಲಾಕ್ ಡೌನ್ ಉಲ್ಲಂಘಿಸುವುದನ್ನು ಬಿಟ್ಟು ಸರಿಯಾಗಿ ಪಾಲನೆ ಮಾಡಿ ಸರ್ಕಾರದ ಜತೆ ಕೈ ಜೋಡಿಸಿದರೆ ಎಲ್ಲಾ ದೃಷ್ಟಿಯಿಂದಲೂ ನಮಗೇ ಸೇಫ್ ಎನ್ನುವುದನ್ನು ಮರೆಯಬೇಡಿ.