ಬೆಂಗಳೂರು: ಕೊರೋನಾ ಎಲ್ಲರಲ್ಲೂ ಹಲವು ಲಕ್ಷಣಗಳನ್ನು ಹೊತ್ತು ತರುವುದಿಲ್ಲ. ಉದಾಹರಣೆಗೆ ನಟಿ ಐಶ್ವರ್ಯಾ ರೈಯನ್ನೇ ತೆಗೆದುಕೊಳ್ಳಿ. ಅವರಲ್ಲಿ ಯಾವುದೇ ಲಕ್ಷಣಗಳಿಲ್ಲದೇ ಇದ್ದರೂ ಕೊರೋನಾ ಇರುವುದು ದೃಢಪಟ್ಟಿತ್ತು. ಇಂತಹ ರೋಗಿಗಳು ಮನೆಯಲ್ಲಿಯೇ ಯಾವ ರೀತಿ ಕಾಳಜಿ ವಹಿಸಿಕೊಳ್ಳಬಹುದು ನೋಡೋಣ.
-
ಆದಷ್ಟು ಬಿಸಿ ನೀರು ಅಥವಾ ಪಾನೀಯ ಸೇವಿಸುತ್ತಾ ಇರಬೇಕು.
-
ಪೋಷಕಾಂಶಯುಕ್ತ ಆಹಾರ, ಅಧಿಕ ತರಕಾರಿ, ಹಣ್ಣುಗಳ ಸೇವನೆ ಮಾಡಿ.
-
ತಿಂದ ತಟ್ಟೆ, ಲೋಟಗಳನ್ನು ಬಿಸಾಡುವಾಗ ಎಚ್ಚರಿಕೆ ವಹಿಸುವುದು. (ಆದಷ್ಟು ಯೂಸ್ ಆಂಡ್ ಥ್ರೋ ಪಾತ್ರ ಬಳಸಿ).
-
ಮನೆಯಲ್ಲಿ ಸದಾ ಎನ್ 95 ಮಾಸ್ಕ್ ಧರಿಸಿ, ಇತರರಿಂದ ದೂರವಿರಿ.
-
ಆಗಾಗ ದೇಹದ ಉಷ್ಣತೆ ನೋಡಿಕೊಂಡು ಆರೋಗ್ಯಾಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರಿ.
-
ಮನೆಯ ಇತರರ ಸದಸ್ಯರಿಂದ ಸ್ಟ್ರಿಕ್ಟ್ ಆಗಿ ದೂರವಿದ್ದು, ಒಬ್ಬರು ಮಾತ್ರ ನಿಮಗೆ ಅಗತ್ಯ ವಸ್ತುಗಳನ್ನು ನೀಡಲಿ. ಅದೂ 3 ಅಡಿ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.