ಬೆಂಗಳೂರು: ಲಾಕ್ ಡೌನ್ ಮುಗಿದ ತಕ್ಷಣ ಮನೆಯಿಂದ ಹೊರಬಂದು ಎಂದಿನಂತೆ ಬಿಂದಾಸ್ ಆಗಿ ಇರಲು ಕಾಯುತ್ತಿರುವ ಜನತೆ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಲೇಬೇಕು. ಲಾಕ್ ಡೌನ್ ಮುಗಿದಿದೆ ಎಂದ ಮಾತ್ರಕ್ಕೆ ಕೊರೋನಾ ಭಯವಿಲ್ಲ ಎಂದರ್ಥವಲ್ಲ.
ರೋಗ ನಿಯಂತ್ರಣಕ್ಕೆ ಲಾಕ್ ಡೌನ್ ಬಳಿಕವೂ ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಮುಖ್ಯ. ಪ್ರತಿನಿತ್ಯ ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು, ಮನೆಗೆ ಬಂದ ತಕ್ಷಣ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳುವುದು, ಮನೆಗೆ ತರುವ ಹಣ್ಣು-ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದೇ ಉಪಯೋಗಿಸುವುದನ್ನು ಮಾತ್ರ ಮರೆಯಬೇಡಿ.
ಅಷ್ಟೇ ಅಲ್ಲದೆ, ಲಾಕ್ ಡೌನ್ ಮುಗಿಯಿತೆಂದು ಎಲ್ಲೆಂದರೆಲ್ಲಿ ಬೇಕಾಬಿಟ್ಟಿ ಓಡಾಡುವುದು, ಗುಂಪು ಸೇರುವುದು ಮಾಡಬೇಡಿ. ನಮ್ಮ ಜವಾಬ್ಧಾರಿ, ಎಚ್ಚರಿಕೆ ಮರೆತರೆ ಮತ್ತೆ ಇನ್ನಷ್ಟು ತೊಂದರೆ ಅನುಭವಿಸಬೇಕಾದೀತು.