ಕಲಬುರ್ಗಿ: ಕೊರೊನಾ ಮೂರನೇ ಅಲೆ ಅಟ್ಟಹಾಸದ ನಡುವೆ ಕಲಬುರ್ಗಿ ಜಿಲ್ಲೆಯಲ್ಲಿ ಡೆಂಗ್ಯೂ ಹಾವಳಿ ಹೆಚ್ಚಿದ್ದು, ಸಾವಿರಾರು ಜನರು ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿಲ್ಲೆಯ ಜನರಲ್ಲಿ ಡೆಂಗ್ಯೂ ಜ್ವರ ಹೆಚ್ಚಿದ್ದು, ಸರ್ಕಾರಿ, ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿವೆ. ಪ್ರತಿ ದಿನ ಜನರು ಆತಂಕದಿಂದ ಬದುಕುವಂತಾಗಿದೆ.
ಮಾರ್ಚ್, ಏಪ್ರೀಲ್ ನಲ್ಲಿ ಒಂದಿಬ್ಬರಲ್ಲಿ ಕಾಣಿಸಿಕೊಂಡಿದ್ದ ಡೆಂಗ್ಯೂ ಜ್ವರ ಜುಲೈನಲ್ಲಿ 30 ಜನರಲ್ಲಿ ಡೆಂಗ್ಯೂ ವರದಿಯಾಗಿತ್ತು. ಇದೀಗ ಆಗಸ್ಟ್ ಮೊದಲ ವಾರದಲ್ಲಿ ಮತ್ತೆ 30 ಜನರಲ್ಲಿ ಡೆಂಗ್ಯೂ ದೃಢವಾಗಿದೆ.