ನವದೆಹಲಿ : ಭಾರತದಲ್ಲಿ ಕೊವಿಡ್ ಉಚಿತ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ನೀಡಲು ತುರ್ತು ಅನುಮತಿಯನ್ನು ಕೂಡ ನೀಡಲಾಗಿದೆ.
ಹಲವು ದೇಶಗಳು ʼಬೂಸ್ಟರ್ ಶಾಟ್ʼ ಕೂಡ ನೀಡಲು ಆರಂಭಿಸಿವೆ. ಇತ್ತೀಚಿನ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಅಧ್ಯಯನದ ಪ್ರಕಾರ, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಯ ಡೋಸ್ಗಳನ್ನು ಒಟ್ಟಿಗೆ ಬೆರೆಸುವುದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.
ಈ ಸಂಶೋಧನೆಗಾಗಿ ನಾನಾ ರೀತಿಯ ಜನರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಂದು ವಾರಗಳ ಅಂತರದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಡೋಸ್ಗಳನ್ನು ನೀಡಲಾಯಿತು. 18 ಜನರಿಗೆ ಮೊದಲು ಕೋವಿಶೀಲ್ಡ್ ಅನ್ನು ಮೊದಲ ಶಾಟ್ ಆಗಿ ಮತ್ತು ಕೊವ್ಯಾಕ್ಸಿನ್ ಅನ್ನು ಎರಡನೇ ಶಾಟ್ ಆಗಿ ನೀಡಲಾಯಿತು.
ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಪ್ರಸ್ತುತ ಭಾರತದಲ್ಲಿ ಬಳಕೆಯಲ್ಲಿರುವ ಪ್ರಾಥಮಿಕ ಕೋವಿಡ್-19 ಲಸಿಕೆಗಳಾಗಿವೆ. ಒಂದೇ ರೀತಿಯ ಆದರೂ ವಿಭಿನ್ನ ಸಾಂಪ್ರದಾಯಿಕ ಲಸಿಕೆ ತಯಾರಿಸುವ ತಂತ್ರಜ್ಞಾನ ವೇದಿಕೆಗಳನ್ನ ಬಳಸಿಕೊಂಡು ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕೊವಾಕ್ಸಿನ್ ಅನ್ನು ಇತ್ತೀಚೆಗೆ 2ರಿಂದ 18 ವರ್ಷದೊಳಗಿನ ಮಕ್ಕಳಿಗೂ ತುರ್ತು ಬಳಕೆಗೆ ಅನುಮೋದಿಸಲಾಗಿದೆ.