ನವದೆಹಲಿ: ಕೊರೋನಾ..! ಈ ಒಂದು ಶಬ್ಧ ನಮ್ಮ ಜೀವನವನ್ನೇ ಬದಲಾಯಿಸಿದ, ನಾವು ಯಾವತ್ತಿಗೂ ಮರೆಯಲಾಗದ ಒಂದು ವೈರಸ್. ಈ ಕೊರೋನಾ ನಮ್ಮ ದೇಶಕ್ಕೆ ಬಂದು ಇಂದಿಗೆ ಒಂದು ವರ್ಷವಾಗಿದೆ. ಅಂದರೆ ಇಂದು ಕೊರೋನಾಗೆ ಭಾರತದಲ್ಲಿ ಮೊದಲ ಆನಿವರ್ಸರಿ!
ಮಾರ್ಚ್ 8 ಕ್ಕೆ ಭಾರತದಲ್ಲಿ ಕಳೆದ ವರ್ಷ ಮೊದಲ ಕೊರೋನಾ ಕೇಸ್ ಪತ್ತೆಯಾಗಿತ್ತು. ಬೆಂಗಳೂರಿನ ಟೆಕ್ಕಿಯಲ್ಲಿ ಮೊದಲ ಬಾರಿಗೆ ಕೊರೋನಾ ಕೇಸ್ ಪತ್ತೆಯಾಗಿತ್ತು. ಸದ್ಯಕ್ಕೆ ಸೋಂಕಿತರ ಸಾಲಿನಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ. ಇಂದಿಗೂ ರಾಜ್ಯದಲ್ಲಿ 6 ಸಾವಿರದಷ್ಟು ಸಕ್ರಿಯ ಕೇಸ್ ಗಳಿವೆ.
ವಿಶೇಷವೆಂದರೆ ಇಂದಿಗೆ ಕೊರೋನಾಗೆ ವ್ಯಾಕ್ಸಿನ್ ಕೂಡಾ ಪತ್ತೆ ಮಾಡಲಾಗಿದೆ. ಸದ್ಯಕ್ಕೆ ಸೋಂಕು ಹತೋಟಿಯಲ್ಲಿದೆ. ಭಾರತದ ಮತ್ತೆ ನಿಧಾನವಾಗಿ ತನ್ನ ಸಹಜ ಸ್ಥಿತಿಗೆ ಮರಳುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳಿಗೆ, ಕಷ್ಟದಲ್ಲಿದ್ದಾಗ ಸಹಾಯ ಮಾಡಿದ ಎಷ್ಟೋ ಸಂಘ ಸಂಸ್ಥೆಗಳು, ಜನರಿಗೆ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಲೇಬೇಕು.