Publish Date: Sun, 10 May 2020 (09:12 IST)
Updated Date: Sun, 10 May 2020 (09:14 IST)
ಬೆಂಗಳೂರು: ಕೊರೋನಾ ವಾರಿಯರ್ಸ್ ಗೆ ಧನ್ಯವಾದ ಸಲ್ಲಿಸುವ ಸೋಷಿಯಲ್ ಮೀಡಿಯಾ ಅಭಿಯಾನದಲ್ಲಿ ಪಾಲ್ಗೊಂಡ ಕ್ರಿಕೆಟಿಗ ಅನಿಲ್ ಕುಂಬ್ಳೆ ಮಹಾಮಾರಿಯನ್ನು ಟೆಸ್ಟ್ ಕ್ರಿಕೆಟ್ ಗೆ ಹೋಲಿಕೆ ಮಾಡಿದ್ದಾರೆ.
ಕೊರೋನಾ ಸೆಕೆಂಡ್ ಇನಿಂಗ್ಸ್ ಇನ್ನಷ್ಟು ಕಷ್ಟಕರವಾಗಿರಲಿದೆ. ಹೀಗಾಗಿ ಎಚ್ಚರಿಕೆಯಿಂದ ಆಡಬೇಕು. ಎಲ್ಲಾ ಕೊರೋನಾವಾರಿಯರ್ಸ್ ಗೆ ನನ್ನ ನಮನ ಎಂದು ವಿಡಿಯೋ ಸಂದೇಶದಲ್ಲಿ ಕುಂಬ್ಳೆ ಹೇಳಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಈ ಸೋಷಿಯಲ್ ಮೀಡಿಯಾ ಅಭಿಯಾನದಲ್ಲಿ ಪಾಲ್ಗೊಳ್ಳಲು ಅನಿಲ್ ಕುಂಬ್ಳೆ ಹೆಸರು ನಾಮಿನೇಟ್ ಮಾಡಿದ್ದರು.