Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚಟಾಪಟ್ ಮಶ್ರೂಮ್ ಬಿರಿಯಾನಿ, ತಯಾರಿಸುವುದು ಹೇಗೆ...?

ಚಟಾಪಟ್ ಮಶ್ರೂಮ್ ಬಿರಿಯಾನಿ, ತಯಾರಿಸುವುದು ಹೇಗೆ...?
ಬೆಂಗಳೂರು , ಶುಕ್ರವಾರ, 21 ಅಕ್ಟೋಬರ್ 2016 (14:57 IST)

ಬೆಂಗಳೂರು: ಮಶ್ರೂಮ್ ಎಂದರೆ ಯಾರಿಗೆ ತಾನೆ ಬಾಯಲ್ಲಿ ನೀರೂರಲ್ಲ ಹೇಳಿ. ಎಲ್ಲ ವರ್ಗದ ಜನರನ್ನೂ ತನ್ನತ್ತ ಸೆಳೆಯುವ ವಿಶೇಷ ಪದಾರ್ಥ ಅದಾಗಿದೆ. ಅದರಿಂದ ಎಷ್ಟೆಲ್ಲ ರುಚಿಕಟ್ಟಾದ ಖಾದ್ಯ ಪದಾರ್ಥ ತಯಾರಿಸುತ್ತಾರೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇರುವ ವಿಷಯ. ಅದೇ ರೀತಿ ಇವತ್ತು ನಾವು, ಮೊಶ್ರೂಮ್ ಬಳಸಿ ಬಿರಿಯಾನಿ ಹೇಗೆ ಮಾಡಬಹುದು ಎನ್ನುವುದನ್ನು ನೋಡೋಣ.
 


 

ಮೊಶ್ರೂಮ್ ಬಿರಿಯಾನಿ ತಯಾರಿಸಲು ಬೇಕಾದ ಸಾಮಾನುಗಳು:

ಮೊಶ್ರೂಮ್ 200 ಗ್ರಾಂ, ಅಕ್ಕಿ 200 ಗ್ರಾಂ, ಚಿಕನ್ ಮಸಾಲಾ, ಉಪ್ಪು, ಸಕ್ಕರೆ, ಎಣ್ಣೆ, ಪುದೀನಾ, ಕೋತಂಬರಿ, ಈರುಳ್ಳಿ, ಏಲಕ್ಕಿ, ಚಕ್ಕೆ, ಲವಂಗ, ಮೊಸರು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟಮಾಟೋ, ಮೆಣಸಿನಕಾಯಿ.

 

ಮಾಡುವ ವಿಧಾನ:

ಮೊದಲು ಒಂದೊಂದು ಮೊಶ್ರೂಮ್ ನ್ನು ಎರಡು ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ. ನಂತರ ಕುಕ್ಕರನಲ್ಲಿ ನಾಲ್ಕು ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಕಾದ ನಂತರ ಸಾಸಿವೆ, ಏಲಕ್ಕಿ, ಲವಂಗ, ಚಕ್ಕೆ ಹಾಕಬೇಕು. ತದನಂತರ ಈರುಳ್ಳಿ, ಹೆಚ್ಚಿಟ್ಟುಕೊಂಡ ಮೆಣಸಿನಕಾಯಿ ಹಾಕಿ ಚೆನ್ನಾಗಿ ಪ್ರೈ ಮಾಡಿ. ಪ್ರೈ ಆದ ತಕ್ಷಣ ಮೊಶ್ರೂಮ್ ಹಾಕಿ ಪ್ರೈ ಮಾಡಿಕೊಳ್ಳಿ. ಇದಕ್ಕೆ ಚಿಕನ್ ಮಸಾಲಾ, ಮೆಣಸಿನಕಾರದ ಪುಡಿ, ರುಚಿಗೆ ತಕಷ್ಟು ಉಪ್ಪು ಹಾಕಬೇಕು. ಅದು ಸ್ವಲ್ಪ ಪ್ರೈ ಆದ ತಕ್ಷಣ ಅಕ್ಕಿ, ಅಳತೆಗನುಗುಣವಾಗಿ ನೀರು ಸೇರಿಸಿ. ನಂತರ ಅದಕ್ಕೆ ಪುದಿನಾ ಹಾಗೂ ಕೋತಂಬರಿ ಹಾಕಿ ತುಸು ಬಾಡಿಸಬೇಕು. ಇದಾದ ಬಳಿಕ ಕುಕ್ಕರ್ ಬಾಯಿ ಮುಚ್ಚಿ ಮೂರು ವಿಸಲ್ ಹೊಡಿಸಿದರೆ ಮೊಶ್ರೂಮ್ ಬಿರಿಯಾನಿ ಸವಿಯಲು ಸಿದ್ಧ. ಖಂಡಿತ ಅದ್ರ ರುಚಿಗೆ ನೀವು ಬಾಯಿ ಚಪ್ಪರಿಸದೆ ಇರಲಾರಿರಿ.

 

 ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

16 ವರ್ಷ ಬಾಲಕನಿಗೆ ಸ್ತ್ರೀ ಲೈಂಗಿಕ ಅಂಗಾಂಗಳಿರುವುದು ಪತ್ತೆ