Webdunia - Bharat's app for daily news and videos

Install App

ಕೇಂದ್ರ ಬಜೆಟ್ 2018: 30 ವರ್ಷಗಳ ಅವಧಿಯಲ್ಲಿ ಅದೃಷ್ಟಶಾಲಿ ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ

ramkrishna puranik
ಗುರುವಾರ, 1 ಫೆಬ್ರವರಿ 2018 (11:14 IST)
2018-19 ಸಾಲಿನ ಕೇಂದ್ರ ಬಜೆಟ್ ಸಿದ್ಧವಾಗಿದೆ. ಹಣಕಾಸು ಸಚಿವರಾಗಿರುವ ಅರುಣ್ ಜೇಟ್ಲಿ ಅವರು ನಾಳೆಯ ದಿನ ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಹಿಂದಿನ ಹಣಕಾಸು ಸಚಿವರಿಗಿಂತ ಭಿನ್ನವಾಗಿರುವ ಅರುಣ್ ಜೇಟ್ಲಿ ಅವರು ತಮ್ಮ ವಾರ್ಷಿಕ ಹಣಕಾಸಿನ ವರದಿ ಓದುತ್ತಿರುವಾಗ ಹೆಚ್ಚು ಶಾಂತ ಸ್ವಭಾವದಿಂದ ಇರುತ್ತಾರೆ.
ರಾಜಕೀಯವಾಗಿ ಮತ್ತು ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ, ಕಳೆದ 30 ವರ್ಷಗಳಲ್ಲಿ ಇತರರಿಗಿಂತ ಅರುಣ್ ಜೇಟ್ಲಿಯವರು ಹಣಕಾಸು ಸಚಿವರಾಗಿ ಹೆಚ್ಚು ಭರವಸೆ ನೀಡಿದ್ದಾರೆ. ಜೇಟ್ಲಿಯವರು ತಮ್ಮ ಬಜೆಟ್‌ನ ಪರಿಣಾಮವಾಗಿ ವಸ್ತುಗಳು ದುಬಾರಿ ಅಥವಾ ಕಡಿಮೆಯಾಗುವ ಕುರಿತು ಹೆಚ್ಚು ಚಿಂತಿಸುವುದಿಲ್ಲ ಮತ್ತು ಸರ್ಕಾರದ ಬೊಕ್ಕಸ ಮತ್ತು ಅವರ ಪಕ್ಷದ ರಾಜಕೀಯ ಬಂಡವಾಳದ ಕೊರತೆಯ ನಡುವಿನ ಏರಿಳಿತಗಳ ಸಮತೋಲನವನ್ನು ನಿರ್ವಹಿಸಲು ಶ್ರಮ ಪಡುತ್ತಾರೆ.
 
1984 ರಿಂದ ದೊಡ್ಡ ಪ್ರಮಾಣದ ಜನಾದೇಶ
 
ಅರುಣ್ ಜೇಟ್ಲಿಯವರು ಲೋಕಸಭೆಯಲ್ಲಿನ ಸಂಪೂರ್ಣ ಬಹುಮತದ ಬೆಂಬಲದೊಂದಿಗೆ 2019 ರ ಲೋಕಸಭಾ ಚುನಾವಣೆಗಳನ್ನು ಎದುರಿಸುವ ಮೊದಲು ತಮ್ಮ ಕೊನೆಯ ಸಂಪೂರ್ಣ ಬಜೆಟ್ ಅನ್ನು ಪ್ರಸ್ತುತ ಪಡಿಸಲಿದ್ದಾರೆ. ಕೇಂದ್ರ ಬಜೆಟ್‌ಗೆ ರಾಜ್ಯಸಭೆಯ ಅನುಮೋದನೆ ಕಡ್ಡಾಯವಲ್ಲ, ತಾವು ಇಷ್ಟಪಡದ ಯಾವುದೇ ಮಾರ್ಪಾಡುಗಳಿಲ್ಲದೆಯೇ ಅದನ್ನು ಜಾರಿಗೆ ತರುವ ಭರವಸೆ ಜೇಟ್ಲಿಯವರಿಗೆ ಇದೆ.
 
1991 -ಉದಾರೀಕರಣದಿಂದ ಆರು ಹಣಕಾಸು ಸಚಿವರು ಕೇಂದ್ರದ ಬಜೆಟ್ ಅನ್ನು ಮಂಡಿಸಿದ್ದಾರೆ ಆದರೆ ಅರುಣ್ ಜೇಟ್ಲಿ ಅವರು ಮಾತ್ರ ಆಡಳಿತ ಪಕ್ಷದ ಸಂಪೂರ್ಣ ಬಹುಮತವನ್ನು ಪಡೆದಿದ್ದಾರೆ. ಲೋಕಸಭೆಯ 543 ಸ್ಥಾನಗಳಲ್ಲಿ 282 ರ ಹಿತಕರ ಬಹುಮತವನ್ನು ಹೊಂದಿರುವ ಬಿಜೆಪಿಯ ಮಿತ್ರರನ್ನು ಸಂತೋಷಪಡಿಸುವ ಕುರಿತು ಸಹ ಜೇಟ್ಲಿ ಅವರು ಚಿಂತಿಸುವುದಿಲ್ಲ.
 
ಮನಮೋಹನ್ ಸಿಂಗ್, ಪಿ. ಚಿದಂಬರಂ, ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್ ಮತ್ತು ಪ್ರಣಾಬ್ ಮುಖರ್ಜಿ ಅವರನ್ನು ಎಲ್ಲ ಸಮ್ಮಿಶ್ರ ರಾಜಕೀಯದ ಪ್ರಚೋದನೆಗಳು ಬಲವಂತವಾಗಿಸಿದವು. ಇದಕ್ಕೆ ವಿರುದ್ಧವಾಗಿ, ಅರುಣ್ ಜೇಟ್ಲಿ ಅವರು ಸತತ ಐದನೇ ವರ್ಷದ ಕೇಂದ್ರ ಬಜೆಟ್ ಅನ್ನು ಯಾವುದೇ ಒತ್ತಡಗಳಿಲ್ಲದೇ ಮಂಡಿಸಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments