Select Your Language

Notifications

webdunia
webdunia
webdunia
webdunia

ಮೊನಲಿಸಾ ನಟಿಸುತ್ತಿರುವ ಸಿನಿಮಾ ಡೈರೆಕ್ಟರ್‌ಗೆ ಯೂಟ್ಯೂಬರ್‌ಗಳ ಕಾಟ

ಮೊನಲಿಸಾ ನಟಿಸುತ್ತಿರುವ ಸಿನಿಮಾ ಡೈರೆಕ್ಟರ್‌ಗೆ ಯೂಟ್ಯೂಬರ್‌ಗಳ ಕಾಟ

Sampriya

ಮುಂಬೈ , ಬುಧವಾರ, 26 ಫೆಬ್ರವರಿ 2025 (15:57 IST)
Photo Courtesy X
ಮುಂಬೈ: ಮಹಾಕುಂಭಮೇಳದ ಸಂದರ್ಭದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿ, ಇದೀಗ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಮೊನಾಲಿಸಾ ಅಭಿನಯದ ಸಿನಿಮಾದ  ಡೈರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಯೂಟ್ಯೂಬ್ ಚಾನೆಲ್ ಮಾಲೀಕ ಸೇರಿದಂತೆ ಐವರ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಪೊಲೀಸರೊಬ್ಬರು ಮಾಹಿತಿ ನೀಡಿ,  ನಿರ್ದೇಶಕ ಸನೋಜ್‌ ಮಿಶ್ರಾ ಅವರು ನೀಡಿದ ದೂರಿನಂತೆ ಮುಂಬೈನ ಉಪನಗರದಲ್ಲಿರುವ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಯಾಗರಾಜ್‌ನ 'ಮಹಾ ಕುಂಭಮೇಳದ ವೇಳೆ ಸರ ಮಾರಾಟ ಮಾಆಡುತ್ತಿದ್ದ ಮೊನಾಲಿಸಾ ತಮ್ಮ ಕಣ್ಣಿನ ನೋಟದ ಮೂಲಕ ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿ, ಭಾರೀ ವೈರಲ್ ಆಗಿದ್ದಳು.  ಸಾಮಾಜಿಕ ಜಾಲತಾಣದಲ್ಲಿ ಈಕೆಯೆ ಸೌಂದರ್ಯದ ವಿಡಿಯೋ ವೈರಲ್ ಆಗಿತ್ತು. ಆ ನಂತರ ಮೊನಾಲಿಸಾಗೆ ಸಿನಿಮಾ ಬೇಡಿಕೆಗಳು ಸಾಕಷ್ಟು ಬರುತ್ತಿದೆ. ಇದೀಗ ದಿ ಡೈರಿ ಆಫ್ ಮಣಿಪುರ' ಚಲನಚಿತ್ರವನ್ನು ನಿರ್ಮಿಸುವುದಾಗಿ ಮಿಶ್ರಾ ಘೋಷಿಸಿದ್ದು, ಇದರಲ್ಲಿ ನಾಯಕಿಯಾಗಿ ಮೊನಾಲಿಸಾ ಆಯ್ಕೆಯಾಗಿದ್ದಾರೆ.

ದೂರಿನಲ್ಲಿ ಮಿಶ್ರಾ ಅವರು ತಮ್ಮ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅವರಲ್ಲಿ ಒಬ್ಬರು ಮಿಶ್ರಾ ನಿರ್ದೇಶಿಸಿದ ಯಾವುದೇ ಚಲನಚಿತ್ರಗಳು ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಮತ್ತು ಅವರು 16 ವರ್ಷದ ಭೋಸ್ಲೆ ಅವರ ವೃತ್ತಿಜೀವನವನ್ನು "ಹಾಳು" ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆಂದು ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಡರ್ ಕೇಸ್ ಇದ್ದರೇನು, ಡೆಲ್ಲಿ, ಮುಂಬೈಗೆ ಹೋಗಲಿರುವ ಪವಿತ್ರಾ ಗೌಡ