ಮುಂಬೈ : ರಾಕೇಶ್ ಶರ್ಮಾ ಅವರ ಜೀವನಕತೆಯಾಧಾರಿತ ಚಿತ್ರ ‘ಸೆಲ್ಯೂಟ್’ ನಲ್ಲಿ ನಟ ಶಾರೂಖ್ ಖಾನ್ ಜೊತೆಗೆ ಅಭಿನಯಿಸಲು ಪ್ರಿಯಾಂಕ ಚೋಪ್ರಾ ಗೆ ಆಫರ್ ಬಂದಿತ್ತು. ಆದರೆ ಇದಕ್ಕೆ ಪ್ರಿಯಾಂಕ ನೋ ಎಂದಿದ್ದಾರಂತೆ. ಇದಕ್ಕೆ ನಿಖರವಾದ ಕಾರಣ ತಿಳಿಯದಿದ್ದರೂ ಈ ಹಿಂದೆ ನಟಿ ಪ್ರಿಯಾಂಕ ಹೆಸರು ನಟ ಶಾರೂಖ್ ಖಾನ್ ಜೊತೆಗೆ ತಳಕು ಹಾಕಿಕೊಂಡಿರುವುದೇ ಕಾರಣ ಎಂಬ ಮಾತು ಕೇಳಿಬಂದಿದೆ.
ಹೌದು ಡಾನ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಪ್ರಿಯಾಂಕ ಹಾಗೂ ಖಾನ್ ಗೆಳೆತನಕ್ಕಿಂತಲೂ ಮೀರಿದ ಸಂಬಂಧದಲ್ಲಿದ್ದುದ್ದು ಚಿತ್ರತಂಡದವರಿಗೆ ಗೊತ್ತಾಗಿ ಹೋಗಿತ್ತಂತೆ. ಈ ಸುದ್ದಿ ಮಾಧ್ಯಮಗಳ ಗಮನ ಸೆಳೆಯಿತು. ಹೀಗಾಗಿ ಈ ವಿಚಾರ ಶಾರೂಖ್ ಖಾನ್ ಪತ್ನಿ ಗೌರಿ ಕಿವಿಗೂ ಬಿದ್ದಿತಂತೆ. ಒಂದು ಹಂತದಲ್ಲಿ ಪ್ರಿಯಾಂಕ ಹಾಗೂ ಶಾರೂಖ್ ಸಂಬಂಧದ ವಿಚಾರ, ಗೌರಿ ಖಾನ್ ಹಾಗೂ ಶಾರೂಖ್ ಖಾನ್ ಅವರ ವಿಚ್ಛೇದನದವರೆಗೂ ಸಾಗಿತ್ತು ಎಂಬ ಮಾತುಗಳೂ ಕೂಡ ಕೇಳಿಬಂದಿತ್ತು. ನಂತರ ಎಚ್ಚೆತ್ತ ಗೌರಿ, ಇನ್ನೂ ಮುಂದೆ ಪ್ರಿಯಾಂಕ ಜೊತೆಗೆ ತೆರೆ ಹಂಚಿಕೊಳ್ಳದಂತೆ ಕಂಡಿಷನ್ ಹಾಕಿದ್ದಾರಂತೆ.
ಆದರೆ ಈ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಶಾರುಖ್ ಖಾನ್ ನಿಜ ಹೇಳಬೇಕು ಎಂದರೆ, ನನಗೆ ಬೇರೆ ಹಿರೋಯಿನ್ ಗಳ ಜೊತೆಗೆ ನಟಿಸುವಾಗ ಒಂಥಾರ ಅಷ್ಟೊಂದು ಕಂಫರ್ಟ್ ಫೀಲ್ ಆಗೋದಿಲ್ಲ. ಆದರೆ ಪ್ರಿಯಾಂಕ ಚೋಪ್ರಾ ನನ್ನ ಬೇಸ್ಟ್ ಪ್ರೇಂಡ್ ಕೂಡ ಹೌದು. ಇದೇ ಕಾರಣಕ್ಕೇನೋ ಆಕೆಯೊಂದಿಗೆ ನಟಿಸುವಾಗ ನಾನು ಕಂಫರ್ಟ್ ಆಗಿರುತ್ತೇನೆ. ಇಷ್ಟಕ್ಕೆ ಬೇರೆ ಅರ್ಥ ಕಲ್ಪಿಸಿದರೆ ನಾನು ಏನೂ ಮಾಡಲಿ ಎಂದಿದ್ದರಂತೆ.
ಮಹೇಶ್ ಮಥಾಯ್ ನಿರ್ದೇಶನದ ಸೆಲ್ಯೂಟ್ ಸಿನಿಮಾದಲ್ಲಿ ಇದೀಗ ಶಾರುಖ್ ಖಾನ್ ಜೊತೆಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ನಟಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ