ಮುಂಬೈ : ಎಂಜಿನಿಯರಿಂಗ್ ಪದವಿ ಪಡೆಯುವ ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳಿಗಾಗಿ ಸೂಪರ್ 30 ಕೋಚಿಂಗ್ ಸೆಂಟರ್ ವೊಂದನ್ನು ನಡೆಸುತ್ತಿರುವ ಆನಂದ್ ಕುಮಾರ್ ಅವರ ಜೀವನಾಧರಿತ ‘ಸೂಪರ್ 30’ ಚಿತ್ರ ದಲ್ಲಿ ನಟ ಹೃತಿಕ್ ರೋಷನ್ ಅಭಿನಯಿಸುತ್ತಿದ್ದು, ಈ ಚಿತ್ರಕ್ಕಾಗಿ ಅವರು ಜೈಪುರದ ಬೀದಿ ಬೀದಿಯಲ್ಲಿ ಹಪ್ಪಳ ಮಾರುತ್ತಿದ್ದಾರೆ.
ವಿಕಾಸ್ ಬಹ್ಲ್ ಅವರು ನಿರ್ದೇಶಿಸುವ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಆನಂದ್ ಕುಮಾರ್ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದು, ಹಳೆಯ ಪ್ಯಾಂಟ್, ಶರ್ಟ್ ಧರಿಸಿ ಹೆಗಲ ಮೇಲೊಂದು ಟವಲ್ ಹಾಕಿಕೊಂಡು ಸೈಕಲ್ ಏರಿ ಹಪ್ಪಳ ಮಾರಾಟ ಮಾಡುತ್ತಿದ್ದಾರೆ. ಹೃತಿಕ್ ರೋಷನ್ ಅವರು ಈ ಪಾತ್ರಕ್ಕೆ ಎಷ್ಟರ ಮಟ್ಟಿಗೆ ಜೀವ ತುಂಬಿದ್ದಾರೆಂದರೆ ಅವರ ಈ ವೇಷಭೂಷಣ ಕಂಡು ಜನಸಾಮಾನ್ಯರು ಯಾರೂ ಗುರುತು ಹಿಡಿಯಲಿಲ್ಲ. ಅಲ್ಲದೆ ಸ್ವತಃ ಆನಂದ್ ಕುಮಾರ್ ಅವರೇ ಹೃತಿಕ್ ರೋಷನ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ