ಮುಂಬೈ : ಬಾಲಿವುಡ್ ನಟ ಅಜಯ್ ದೇವಗನ್ ಅವರು ತಮ್ಮ ಪತ್ನಿ ಕಾಜೋಲ್, ಪುತ್ರಿ ನ್ಯಾಸಾ ಹಾಗೂ ಪುತ್ರ ಯುಗ್ ಜೊತೆ ಪ್ಯಾರಿಸ್ ಗೆ ತೆರಳಿದ್ದು, ಅಲ್ಲೇ ತಮ್ಮ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದರು. ಆದರೆ ಇದೀಗ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಫೋಟೋ ಒಂದು ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ನಟ ಅಜಯ್ ದೇವಗನ್ ಅವರು ತಮ್ಮ ಮಗನ ಜೊತೆಗೆ ಪ್ಯಾರಿಸ್ ನಲ್ಲಿ ತೆಗೆಸಿಕೊಂಡಿರುವ ಫೋಟೋ ಒಂದನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋ ನೋಡಿದ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುವ ಬದಲು ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಹಾಗಾದ್ರೆ ಆ ಫೋಟೋದಲ್ಲಿ ಅಂತಹದೇನಿದೆಯಪ್ಪಾ ಅಂದರೆ ಅದರಲ್ಲಿ ಅಜಯ್ ದೇವಗನ್ ಒಂದು ಕೈನಲ್ಲಿ ಮಗನ ಮುಖವನ್ನು ಹಿಡಿದಿದ್ದರೆ ಮತ್ತೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿರೋದು. ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಒಂದು ಕಡೆಯಾದರೆ, ಪುಟ್ಟ ಮಗ ಜೊತೆಯಲ್ಲಿರುವಾಗ ಆತನ ಮುಂದೆ ಸಿಗರೇಟ್ ಸೇವನೆ ಮಾಡಿರುವುದು ಎಷ್ಟು ಒಳ್ಳೆಯದು ಎಂದು ಪ್ರಶ್ನಿಸಿದ ಅಭಿಮಾನಿಗಳು ಚಿಕ್ಕ ಮಕ್ಕಳ ಮುಂದೆ ಇಂತದ್ದನ್ನೆಲ್ಲಾ ಮಾಡಬೇಡಿ ಎಂದು ಸಲಹೆಯನ್ನೂ ಕೂಡ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ