Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳಾ ದಿನಾಚರಣೆಯಂದು ರಾಮ್ ಗೋಪಾಲ್ ವರ್ಮಾ ಮಾಡಿದ ವಿಚಿತ್ರ ಟ್ವೀಟ್ ಏನು ಗೊತ್ತಾ…?

ಮಹಿಳಾ ದಿನಾಚರಣೆಯಂದು ರಾಮ್ ಗೋಪಾಲ್ ವರ್ಮಾ ಮಾಡಿದ ವಿಚಿತ್ರ ಟ್ವೀಟ್ ಏನು ಗೊತ್ತಾ…?
ಬೆಂಗಳೂರು , ಶನಿವಾರ, 10 ಮಾರ್ಚ್ 2018 (05:52 IST)
ಬೆಂಗಳೂರು : ಒಂದಲ್ಲ ಒಂದು ರೀತಿಯಲ್ಲಿ ವಿವಾದ ಸೃಷ್ಟಿಸುವ ಚಾಣಕ್ಷತನವಿರುವ ಬಹುಭಾಷಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಅಂತರಾಷ್ಟ್ರೀಯ ಮಹಿಳಾ ದಿನದಂದು ವಿಚಿತ್ರವಾದ ಟ್ವೀಟ್ ವೊಂದನ್ನು ಮಾಡಿ ಸುದ್ದಿಯಲ್ಲಿದ್ದಾರೆ.


ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟರ್ ನಲ್ಲಿ,’ನನ್ನ ಪ್ರಕಾರ ವರ್ಷದಲ್ಲಿ ಕೇವಲ ಒಂದು ದಿನವನ್ನು ಮಾತ್ರ ಮಹಿಳಾ ದಿನವಾಗಿ ಆಚರಿಸುವುದು ಒಂದು ರೀತಿ ಮಹಿಳೆಯರಿಗೆ ಮಾಡುವ ಅವಮಾನ. ಒಂದು ದಿನವನ್ನು ಮಾತ್ರ ಮಹಿಳೆಯರ ದಿನವೆಂದು ಹೇಳಿದರೆ ಉಳಿದ 364 ದಿನಗಳು ಗಂಡಸರ ದಿನವಾಗಿ ಬಿಡುತ್ತದೆ’ ಎಂದು ವಿಭಿನ್ನವಾಗಿ ಟ್ವೀಟ್ ಮಾಡಿದ್ದಾರೆ.
 ಹಾಗೇ ಈ ಬಗ್ಗೆ ಮತ್ತೊಂದು ಟ್ವೀಟ್ ಮಾಡಿರುವ ಅವರು, ‘ ವರ್ಷದ ಪ್ರತಿದಿನವನ್ನೂ ನಾನು ಮಹಿಳೆಯರ ದಿನವೆಂದು ಗಟ್ಟಿಯಾಗಿ ನಂಬುತ್ತೇನೆ. ಯಾಕೆಂದರೆ ಯಾವ ಪುರುಷನಿಗೂ ಅವನದ್ದೇ ಆದ ದಿನವಿರುವುದಿಲ್ಲ. ವಿಶ್ವ ಮಹಿಳೆಯರ ದಿನದ ರೀತಿ ವಿಶ್ವ ಪುರುಷರ ದಿನವೆಂದು ಯಾಕೆ ಯಾರು ಆಚರಿಸುವುದಿಲ್ಲ’ ಎಂದು ಪ್ರಶ್ನಿಸಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಇಹಾನ್ ದಿಲ್ಲನ್ ಸ್ಯಾಂಡಲ್ ವುಡ್ ನ ಸ್ಟಾರ್ ನಟರೊಬ್ಬರೊಂದಿಗೆ ನಟಿಸಲಿದ್ದಾರೆ. ಆ ಸ್ಟಾರ್ ನಟ ಯಾರು ಗೊತ್ತಾ...?