ನಟಿ ಐಶ್ವರ್ಯ ರೈ ಬಚ್ಚನ್ ಅವರು ಕರ್ನಾಟಕದ ಕರಾವಳಿ ಭಾಗದ ಬಂಟ ಸಮುದಾಯದ ಸದಸ್ಯೆಯಾಗಿದ್ದು, ಆಗಾಗ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರ ಜೊತೆ ಸಂಘದ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅದೇರೀತಿ ಈ ಬಾರಿ ಶನಿವಾರ ಪುಣೆಯಲ್ಲಿ ನಡೆದ ಬಂಟರ ಸಂಘದ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಐಶ್ವರ್ಯ ರೈ ಬಚ್ಚನ್ ಅವರಿಗೆ ಬಂಟರ ಸಂಘವು 'ವುಮನ್ ಆಫ್ ಸಬ್ಸ್ಟೆನ್ಸ್' ಗೌರವ ನೀಡಿ ಸತ್ಕರಿಸಿದೆ. ಇದೇ ಸಂದರ್ಭದಲ್ಲಿ ಅವರು 'ಬಂಟರ ಭವನ'ವನ್ನೂ ಕೂಡ ಉದ್ಘಾಟಿಸಿದ್ದರು. ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಬಂಟರ ಸಮುದಾಯದ ಗಣ್ಯರು ಕೂಡ ಪಾಲ್ಗೊಂಡಿದ್ದರು.
ಬಾಲಿವುಡ್ ನ ಮತ್ತೊಬ್ಬ ನಟಿ ಮಂಗಳೂರಿನ ಮೂಲದ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಕೂಡ ಬಂಟರ ಸಮುದಾಯದ ಇನ್ನೊಬ್ಬ ಸೆಲೆಬ್ರಿಟಿ ಸದಸ್ಯೆಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ