ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಈಗ ನಟಿಯ ಮ್ಯಾನೇಜರ್ ಈ ಸುದ್ದಿಯಲ್ಲಿ ನಿಜವಾದ ಅಂಶ ಇಲ್ಲ, ಇದೊಂದು ಸುಳ್ಳು ಸುದ್ದಿ ಎಂದು ಹೇಳುವುದರ ಮೂಲಕ ಈ ಗಾಸಿಪ್ ಗೆ ತೆರೆ ಎಳೆದಿದ್ದಾರೆ.
‘ಕಂಗನಾ ಯಾವ ಪಕ್ಷವನ್ನು ಸೇರುತ್ತಿಲ್ಲ ಹಾಗೂ ಪ್ರಧಾನಿ ಮೋದಿ ಅವರನ್ನು ಕೂಡ ಭೇಟಿ ಆಗಿಲ್ಲ. ಹಾಗಾಗಿ ಈ ಸುದ್ದಿ ಸುಳ್ಳು. ಕಂಗನಾ ರಾಜಕೀಯದಲ್ಲಿ ಯಾವುದೇ ಆಸಕ್ತಿ ತೋರಿಸಿಲ್ಲ. ಸದ್ಯ ಅವರು ಮಣಿಕರ್ಣಿಕಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಹಾಗೂ ಸಾಲುಸಾಲು ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅಧಿಕೃತ ಮಾಹಿತಿ ಬರುವವರೆಗೂ ದಯವಿಟ್ಟು ಈ ರೀತಿಯ ಸುದ್ದಿಗಳನ್ನು ನಂಬಬೇಡಿ ಎಂದು ಕಂಗನಾ ಮ್ಯಾನೇಜರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ