ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅನುಷ್ಕಾ ಜತೆಯಾಗಿ ಎಲ್ಲಿ ಕಂಡರೂ, ಏನು ಮಾಡಿದರೂ ಅದು ಅಭಿಮಾನಿಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ. ಇತ್ತೀಚೆಗೆ ವಿರಾಟ್ ತನ್ನ ಪ್ರೇಯಸಿ ಅನುಷ್ಕಾ ಶರ್ಮಾಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಸಿಹಿಯಾದ ಸಂದೇಶ ಕಳುಹಿಸಿದ್ದಾರೆ.
ಪ್ರೇಮಿಗಳ ದಿನವನ್ನು ಆನಂದವಾಗಿ ಕಳೆದವೆಂದು ತಿಳಿಸುತ್ತಾ... ಪಾರ್ಕ್ನಲ್ಲಿ ಅನುಷ್ಕಾ ಜತೆ ಸೆಲ್ಫಿ ತೆಗೆದುಕೊಂಡ ಫೋಟೋವನ್ನು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ. ’ಪ್ರತಿ ದಿನ ಪ್ರೇಮಿಗಳ ದಿನಾಚರಣೆ...ಪ್ರತಿ ದಿನ ಹಾಗೇ ಇರುವಂತೆ ಮಾಡಿದೆ ನೀನು’ ಎಂದು ಟ್ವೀಟ್ ಮಾಡಿದ್ದಾರೆ ವಿರಾಟ್.
ಇಷ್ಟೆಲ್ಲಾ ಹೇಳಿದ ಕೊಹ್ಲಿ ಬಳಿಕ ಅದೇನನ್ನಿಸಿತೋ ಏನೋ ಆ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರೊಳಗೆ ಅಭಿಮಾನಿಗಳು ಅದಕ್ಕೆ ಲೈಕ್ಸ್, ರೀಟ್ವೀಟ್ ಮಾಡಿ ಆ ಫೋಟೋವನ್ನು ಊರೆಲ್ಲಾ ಹಂಚಿಯಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.