ದಕ್ಷಿಣದಲ್ಲಿ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿ ಬಳಿಕ ಬಾಲಿವುಡ್ ಅಂಗಳಕ್ಕೆ ಜಿಗಿದ ತಾರೆ ತಾಪ್ಸಿ ಪನ್ನು. ಆಕೆ ಅಭಿನಯದ ಪಿಂಕ್ ಚಿತ್ರ ಎಲ್ಲರ ಮೆಚ್ಚುಗೆಗೆ ಪಾತ್ರಾಗಿದೆ. ದಕ್ಷಿಣದ ಚಿತ್ರಗಳಲ್ಲಿ ತಾಪ್ಸಿ ಈ ಮಟ್ಟದಲ್ಲಿ ಅಭಿನಯ ಸಾಮರ್ಥ್ಯ ತೋರಿರಲಿಲ್ಲ.
ತೆಲುಗು ಚಿತ್ರರಂಗದಲ್ಲಿ ನೆಲೆಯೂರಲು ಸಾಕಷ್ಟು ಪ್ರಯತ್ನಿಸಿದೆ. ಈಗ ಬರುತ್ತಿರುವ ನಾಯಕಿಯರನ್ನು ನೋಡಿ. ಹತ್ತು ಸಿನಿಮಾ ಮಾಡಿದರೂ ತೆಲುಗು ಬರಲ್ಲ. ನಾನು ಮೊದಲ ಸಿನಿಮಾ ಮೂಲಕವೇ ತೆಲುಗು ಕಲಿತೆ. ಚಿತ್ರೋದ್ಯಮದ ಮೇಲೆ ನನಗಿರುವ ಗೌರವ ಅದು. ಆದರೆ ಕಾಲ ಕೂಡಿಬರಲಿಲ್ಲ ಎಂದಿದ್ದಾರೆ.
ಮಾಧ್ಯಮಗಳು ನನ್ನನ್ನು ಐರೆನ್ ಲೆಗ್ ಎಂದು ಕರೆದವು. ಆ ಮುದ್ರೆಯನ್ನು ಅಳಿಸಿಕೊಳ್ಳಲು ತುಂಬಾ ಪ್ರಯತ್ನಿಸಿದೆ ಎಂದಿದ್ದಾರೆ. ತೆಲುಗಿನಲ್ಲಿ ಮಹಿಳಾ ಪ್ರಧಾನ ಚಿತ್ರಗಳು ತುಂಬಾ ಕಡಿಮೆ ಬರುತ್ತಿವೆ. ಹೀರೋ ಇಲ್ಲದಿದ್ದರೆ ಸಿನಿಮಾ ಇಲ್ಲ ಎಂಬಂತಾಗಿದೆ. ಲವ್ ಸ್ಟೋರಿ, ಆಕ್ಷನ್, ಹಾಡುಗಳಿಗೆ ತುಂಬಾ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಬಾಲಿವುಡ್ ಆ ರೀತಿ ಅಲ್ಲ.
ಪಿಂಕ್ ಸಿನಿಮಾ ನೋಡಿ. ಈಗಿನ ಪರಿಸ್ಥಿತಿಗೆ ಕನ್ನಡಿ ಹಿಡಿಯುವ ಚಿತ್ರ ಇದು. ರೆಗ್ಯುಲರ್ ಮಾಸ್ ಮಸಾಲಾ ಅಂಶಗಳೇ ಇಲ್ಲ. ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಬಾಕ್ಸ್ ಆಫೀಸಲ್ಲೂ ಒಳ್ಳೆಯ ಗಳಿಕೆ ಕಂಡಿದೆ. ಚಿತ್ರದಲ್ಲಿ ಕೆಲಸ ಮಾಡಿರುವ ಪ್ರತಿಯೊಬ್ಬರಿಗೂ ಒಳ್ಳೆಯ ಹೆಸರು ಬಂದಿದೆ. ಈ ರೀತಿಯ ಚಿತ್ರಗಳು ಪ್ರಾದೇಶಿಕ ಭಾಷೆಗಳಲ್ಲೂ ಬರಬೇಕು ಎಂದಿದ್ದಾರೆ ತಾಪ್ಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.