Publish Date: Tue, 06 Feb 2018 (07:57 IST)
Updated Date: Tue, 06 Feb 2018 (08:01 IST)
ಮುಂಬೈ : ಖ್ಯಾತ ಹಾಡುಗಾರ ಸೋನು ನಿಗಮ್ ಅವರಿಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿರುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಅವರಿಗೆ ಒದಗಿಸಲಾಗಿದೆ.
ಮಹಾರಾಷ್ಟ್ರದ ಗುಪ್ತಚರ ಇಲಾಖೆ ಪೊಲೀಸ್ ಇಲಾಖೆಗೆ ಕೆಲ ಮೂಲಭೂತವಾದಿ ಸಂಘಟನೆಗಳು ಸೋನು ಹತ್ಯೆಗೆ ಸಂಚು ರೂಪಿಸಿವೆ ಎಂದು ಈ ಬಗ್ಗೆ ಮಾಹಿತಿ ನೀಡಿದೆ. ಇದರಿಂದಾಗಿ ಪೊಲೀಸರು ಸೋನು ನಿಗಮ್ ಗೆ ಹೆಚ್ಚಿನ ಭದ್ರತೆ ಒದಗಿಸಲು ಮುಂದಾಗಿದ್ದಾರೆ.
ಬೆಳ್ಳಂಬೆಳಿಗ್ಗೆ ಕೇಳಿ ಬರುವ ಮುಸ್ಲಿಂಮರ ಅಜಾನ್ ಪ್ರಾರ್ಥನೆ ವಿರುದ್ಧ ಸೋನು ನಿಗಮ್ ಟ್ವೀಟರ್ ನಲ್ಲಿ ಕಿಡಿಕಾರಿದ್ದರು. ಹಿಂದಿನ ವರ್ಷ ಇದು ಚರ್ಚೆಯ ವಿಷ್ಯವಾಗಿತ್ತು. ನಂತ್ರ ರಾಷ್ಟ್ರಗೀತೆ ಬಗ್ಗೆ ಸೋನು ಹೇಳಿದ ಹೇಳಿಕೆ ಕೂಡ ಕೆಲವರನ್ನು ಕೆರಳಿಸಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ