Publish Date: Sat, 07 Jul 2018 (07:27 IST)
Updated Date: Sat, 07 Jul 2018 (07:29 IST)
ತಿರುವನಂತಪುರಂ : ಮಲಯಾಳಂ ಕಿರುತೆರೆ ನಟಿಯೊಬ್ಬರನ್ನು ನಕಲಿ ನೋಟು ಮುದ್ರಣ ಪ್ರಕರಣದಡಿ ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಕಿರುತೆರೆ ನಟಿ ಸೂರ್ಯ ಶಶಿಕುಮಾರ್ ಅವರು ತನ್ನ ತಾಯಿ ಹಾಗೂ ಸೋದರಿಯ ಜೊತೆ ಸೇರಿ ನಕಲಿ ನೋಟು ಮುದ್ರಣ ಮಾಡುತ್ತಿದ್ದಾರೆ ಎಂದು ತಿಳಿದುಬಂದಿರುವ ಹಿನ್ನಲೆಯಲ್ಲಿ ನಟಿ ಸೂರ್ಯ ಮನೆಯಲ್ಲಿ ಪ್ರಿಂಟಿಂಗ್ ಮೆಷಿನ್ ಅನ್ನು ಜಪ್ತಿ ಮಾಡಲಾಗಿದೆ.
ಅಲ್ಲಿ ಎರಡು ಲಕ್ಷ ರೂಪಾಯಿ ನಕಲಿ ನೋಟುಗಳು, ಕಾಗದ, ಪ್ರಿಂಟರ್ಸ್ ಮತ್ತು ನಕಲಿ ನೋಟುಗಳಿಗೆ ಉಪಯೋಗಿಸುವ ಬಣ್ಣ ಹಾಗೂ ಇನ್ನಿತರ ಸಾಮಗ್ರಿಗಳನ್ನು ಕಂಡುಬಂದಿದ್ದು, ಅದನ್ನು ವಶಕ್ಕೆ ಪಡೆದ ಪೊಲೀಸರು ನಟಿ ಸೂರ್ಯ ಶಶಿಕುಮಾರ್, ಆಕೆಯ ತಾಯಿ ಹಾಗೂ ಸೋದರಿ ಸೇರಿ ಮೂವರನ್ನು ಬುಧವಾರ ಬಂಧಿಸಿದ್ದಾರೆ. ಹಾಗೇ ಗುರುವಾರ ಇದಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ ಎಂಟಕ್ಕೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ