Select Your Language

Notifications

webdunia
webdunia
webdunia
webdunia

ಅಭಿಮಾನಿಯ ಕ್ಷಮೆಯಾಚಿಸಿ ನಟ ಗೋವಿಂದಾಗೆ ಸುಪ್ರೀಂ ಆದೇಶ

Supreme order
mumbai , ಗುರುವಾರ, 21 ಡಿಸೆಂಬರ್ 2023 (14:14 IST)
ನ್ಯಾಯಮೂರ್ತಿ  ನೇತೃತ್ವದ ನ್ಯಾಯಪೀಠ, ನಟ ಗೋವಿಂದಾ ತಮ್ಮ ಅಭಿಮಾನಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋ ದೃಶ್ಯ ವಿಕ್ಷೀಸಿ, ಗೋವಿಂದಾ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿತು.
 
ಅಭಿಮಾನಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದ ಬಾಲಿವುಡ್ ನಟ ಗೋವಿಂದಾ, ಇನ್ನೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ವರ್ತನೆ ತೋರಬಾರದು. ಅಭಿಮಾನಿಯ ಕ್ಷಮೆಯಾಚಿಸಿ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. 
 
ಗೋವಿಂದಾ ಸಾರ್ವಜನಿಕ ವ್ಯಕ್ತಿಯಾಗಿದ್ದರಿಂದ ಇಂತಹ ಘಟನೆಗಳಲ್ಲಿ ಪಾಲ್ಗೊಳ್ಳುವುದು ಸರಿಯಲ್ಲ. ರೀಲ್ ಲೈಫ್‌ನಲ್ಲಿರುವುದನ್ನು ರಿಯಲ್ ಲೈಫ್‌ನಲ್ಲಿ ಮಾಡುವ ಅಗತ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು.
 
ಕಪಾಳಮೋಕ್ಷ ಮಾಡಿದ ಅಭಿಮಾನಿಯ ಕ್ಷಮೆ ಕೋರಿ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಿ ಎಂದು ಕೋರ್ಟ್ ನಟ ಗೋವಿಂದನಿಗೆ ಸಲಹೆ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಂಕಿ ರಿವ್ಯೂ: ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಏನಂದ್ರು?