ಬೆಂಗಳೂರು : ಇತ್ತೀಚೆಗೆ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಫಿಟ್ನೆಸ್ ಚಾಲೆಂಜ್ ಹಾಕಿ ಸಾಕಷ್ಟು ಸುದ್ದಿಮಾಡಿದಾಯ್ತು, ಅದೇರೀತಿ ಇದೀಗ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ಹೊಸದೊಂದು ರೀತಿಯಲ್ಲಿ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.
ತಮ್ಮ ಸುತ್ತಮುತ್ತಲಿನವರನ್ನು ಫಿಟ್ ಆಗಿಡುವ ಉದ್ದೇಶದಿಂದ ನಟ ಸುದೀಪ್ ಅವರು 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಎನ್ನುವ ಚಾಲೆಂಜ್ ಅನ್ನುಹಾಕಿದ್ದಾರೆ. 'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ಚಾಲೆಂಜ್ ಎಂದರೆ ಸದ್ಯ ಈಗಿನ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ಅನಂತರ ಪ್ರತಿ ನಿತ್ಯ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರದ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆ ಎರಡು ಫೋಟೋದಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ ಎಂದು ತೋರಿಸಬೇಕು.
ಸುದೀಪ್ ಅವರ ಈ ಸವಾಲಿಗೆ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್, ಅನೂಪ್ ಭಂಡಾರಿ ಮತ್ತು ನಟ ರಾಜೀವ್ ಅವರು ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ