Publish Date: Mon, 26 Feb 2018 (08:08 IST)
Updated Date: Mon, 26 Feb 2018 (08:19 IST)
ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಸಾವು ಇಡೀ ಚಿತ್ರರಂಗಕ್ಕೇ ಶಾಕ್ ಕೊಟ್ಟಿದೆ. ಶ್ರೀದೇವಿ ಅಂತಿಮ ಕ್ಷಣಗಳು ಹೇಗಿದ್ದವು ಗೊತ್ತಾ?
ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಶ್ರೀದೇವಿಗೆ ಪತಿ ಬೋನಿ ಕಪೂರ್ ಸಾಥ್ ನೀಡಿದ್ದರು. ದುಬೈ ಎಮಿರೇಟ್ಸ್ ಹೋಟೆಲ್ ನಲ್ಲಿ ಇವರು ಉಳಿದುಕೊಂಡಿದ್ದರು.
ಸಾಯುವ ಕೆಲವು ಕ್ಷಣಗಳ ಮೊದಲು ಶ್ರೀದೇವಿ ಜತೆ ಮಾತನಾಡಿದ್ದ ಬೋನಿ ಕಪೂರ್ ಡಿನ್ನರ್ ಗೆ ರೆಡಿಯಾಗುವಂತೆ ಹೇಳಲು ಸಂಜೆ ಸುಮಾರು 5. 30 ರ ವೇಳೆಗೆ ನಟಿಯ ಕೊಠಡಿಗೆ ಬಂದಿದ್ದರು. ಸುಮಾರು 15 ನಿಮಿಷ ಶ್ರೀದೇವಿ ಜತೆ ಮಾತನಾಡಿದ ಬೋನಿ ಕಪೂರ್ ಹೊರಗಡೆ ತೆರಳಿದ್ದರು.
ಈ ವೇಳೆ ರೆಡಿಯಾಗಲು ಬಾತ್ ರೂಂಗೆ ತೆರಳಿದ್ದ ಶ್ರೀದೇವಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಎಷ್ಟು ಹೊತ್ತಾದರೂ ಶ್ರೀದೇವಿ ಮರಳದೇ ಇದ್ದಾಗ ಆತಂಕಗೊಂಡ ಬೋನಿ ಕಪೂರ್ ಬಾಗಿಲು ತಟ್ಟಿದ್ದಾರೆ. ಆದರೆ ಆಗ ಪ್ರತಿಕ್ರಿಯೆ ಬರಲಿಲ್ಲ.
ಬಲವಂತವಾಗಿ ಬಾಗಿಲು ಒದ್ದು ಒಳ ಹೋದಾಗ ಶ್ರೀದೇವಿ ನೀರು ತುಂಬಿದ ಬಾತ್ ಟಬ್ ನಲ್ಲಿ ಸ್ತಬ್ಧರಾಗಿ ಮಲಗಿದ್ದರು. ತಕ್ಷಣ ತಮ್ಮ ಸ್ನೇಹಿತರಿಗೆ ಕರೆ ಮಾಡಿದ ಬೋನಿ ಕಪೂರ್, ಆಸ್ಪತ್ರೆಗೂ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ