ಭಾರತೀಯ ಚಿತ್ರರಂಗದಲ್ಲೇ ಬಿಗ್ ಹಿಟ್ ಎನ್ನಲಾಗುತ್ತಿರುವ ಬಾಹುಬಲಿ ಮತ್ತು ಬಾಹುಬಲಿ-2 ಚಿತ್ರದಲ್ಲಿ ಅತ್ಯಂತ ಪರಿಣಾಮಕಾರಿ ಪಾತ್ರಗಳಲ್ಲಿ ಶಿವಗಾಮಿ ಪಾತ್ರವೂ ಒಂದು. ರಾಜಮಾತೆಯಾಗಿ ರಮ್ಯಾಕೃಷ್ಣ ನಟನೆ ಜನಮನ್ನಣೆ ಗಳಿಸಿದೆ. ಚಿತ್ರದಲ್ಲಿ ಅತ್ಯಂತ ಗಮನ ಸೆಳೆವ ಈ ಪಾತ್ರಕ್ಕೆ ರಾಜಮೌಳಿ ಶ್ರೀದೇವಿ ಆಫರ್ ಕೊಟ್ಟಿದ್ದರು. ಆದರೆ, ಸಂಭಾವನೆ ಹೆಚ್ಚು ಕೇಳಿದ್ದರಿಂದ ರಮ್ಯಾ ಕೃಷ್ಣರನ್ನ ಆಯ್ಕೆ ಮಾಡಲಾಯ್ತು ಎಂಬ ಮಾತುಗಳಿವೆ.
ಈ ಬಗ್ಗೆ ಟ್ವಿಟ್ಟರ್`ನಲ್ಲಿ ಪ್ರತಿಕ್ರಿಯಿಸಿರುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಶ್ರೀದೇವಿ ಬಾಹುಬಲಿ-2 ಚಿತ್ರದಲ್ಲಿ ನಟಿಸಲಿಲ್ಲ ಎಂಬುದು ನನಗೆ ಅಚ್ಚರಿ ಎನಿಸುತ್ತಿದೆ. ಆಕೆಯ ಸುದೀರ್ಘ ವೃತ್ತಿ ಜೀವನಕ್ಕೆ ಈ ಚಿತ್ರ ಮುಕುಟಪ್ರಾಯವಾಗಿರುತ್ತಿತ್ತು. ಇಂಗ್ಲೀಷ್ ವಿಂಗ್ಲೀಷ್ ಬಳಿಕ ದೊಡ್ಡ ಹೆಸರು ಮಾಡುವ ಅವಕಾಶ ಶ್ರೀದೇವಿ ಕಳೆದುಕೊಂಡುಬಿಟ್ಟರು. ಪ್ರಭಾಸ್`ಗಿಂತಲೂ ದೊಡ್ಡ ಹೆಸರು ಬರುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ರಾಜಮೌಳಿ ಮನಸ್ಸಿನಲ್ಲಿ ಶಿವಗಾಮಿ ಪಾತ್ರಕ್ಕೆ ಶ್ರೀದೇವಿ ಹೆಸರು ಇತ್ತು. ರಾಘವೇಂದ್ರ ರಾವ್ ಮೂಲಕ ಶ್ರೀದೇವಿಯನ್ನ ಸಂಪರ್ಕಿಸಲಾಗಿತ್ತು. ಶ್ರೀದೇವಿ ಆ ಪಾತ್ರಕ್ಕೆ 5 ಕೋಟಿ ರೂ. ಸಂಭಾವನೆ ಕೇಳಿದ್ದರಂತೆ. ಹೀಗಾಗಿ, ಅವರ ಹೆಸರನ್ನ ಕೈಬಿಟ್ಟು 2.5 ಕೋಟಿ ರೂ. ಸಂಭಾವನೆ ಕೊಟ್ಟು ರಮ್ಯಾಕೃಷ್ಣಗೆ ಶಿವಗಾಮಿ ಪಾತ್ರ ನೀಡಲಾಯ್ತು ಎಂಬ ಸುದ್ದಿ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ