ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಯುನಿಸೆಫ್ ಸೌಹಾರ್ದಯುತ ರಾಯಭಾರಿಯಾಗಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಗೆ ತೆರಳಿದ್ದ ನಟಿ ಅಲ್ಲಿನ ಸಂತ್ರಸ್ತ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ.
ಸಂತ್ರಸ್ತ ಮಕ್ಕಳು ಡ್ಯಾನ್ಸ್ ಬಗ್ಗೆ ಕೇಳಿದ್ದಕ್ಕೆ ಪ್ರಿಯಾಂಕಾ ಕೆಲ ಸ್ಟೆಪ್ ಹಾಕಿ ಮಕ್ಕಳಿಗೆ ಮುದ ನೀಡಿದ್ದಾರೆ. ಮಕ್ಕಳ ಜೊತೆಆತ್ಮೀಯವಾಗಿ ಮಾತನಾಡಿ ಅವರ ನೋವನ್ನ ಮರೆಸುವ ಪ್ರಯತ್ನ ನಡೆಸಿದ್ದಾರೆ. ಈ ವಿಡಿಯೋವನ್ನ ಪಿಗ್ಗಿ ಚಾಪ್ಸ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಎರಡು ದೇಶಗಳ ಪ್ರವಾಸದ ವೇಳೆ ಪ್ರಿಯಾಂಕಾ ಚೋಪ್ರಾ ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತರ ಪರ ನಿಲ್ಲುವಂತೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು. ಜೊತೆಗೆ ಸಂತ್ರಸ್ತರನ್ನ ಭೇಟಿ ಮಾಡಿ ಅವರ ಮೇಲಾದ ಲೈಂಗಿಕ ದೌರ್ಜನ್ಯದ ಸಂಗತಿ ಕೇಳಿ ಅಕ್ಷರಶಃ ಮರುಗಿದ್ದಾರೆ.
`ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಮಕ್ಕಳು ಮತ್ತು ಮಹಿಳೆಯರನ್ನ ಭೇಟಿಯಾದೆ ಅವರ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಕೇಳಿ ನನಗೆ ಆಘಾತವಾಯಿತು. ಅವರ ನೋವಿನ ಕಥೆಗಳನ್ನ ನಾನೆಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.
ಚಿತುಂಗ್ ವಿಜಾದಲ್ಲಿ ತನ್ನ ಚಿಕ್ಕಪ್ಪನಿಂದಲೇ ನಿರಂತರ ಅತ್ಯಾಚಾರಕ್ಕೀಡಾಗಿದ್ದ 13 ವರ್ಷದ ಬಾಲಕಿಯನ್ನ ಭೇಟಿಯಾದ ಪ್ರಿಯಾಂಕಾ ಚೋಪ್ರಾ, ಆಕೆ ಹೇಳಿಕೊಂಡ ನೋವಿನ ಕಥೆಯನ್ನ ಮೆಲುಕು ಹಾಕಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ