ಬೆಳ್ಳಿಪರದೆಗೆ ಕಮಲ್ ಹಾಸನ್ ಪುತ್ರಿ ಎಂದು ಪರಿಚಯವಾದರೂ ತನ್ನದೇ ಆದಂತಹ ಛಾಪು ಮೂಡಿಸಿದ ಬೆಡಗಿ ಶ್ರುತಿ ಹಾಸನ್. ಸಾಲುಸಾಲು ಚಿತ್ರಗಳಲ್ಲಿ ಬಿಜಿಯಾಗಿರುವ ಶ್ರುತಿಗೆ ಇದ್ದಕ್ಕಿಂದ್ದಂತೆ ಸಮಸ್ಯೆಯೊಂದು ಎದುರಾಗಿದೆ. ಆಕೆಯ ಹಳೆ ಗೆಳೆಯನೊಬ್ಬ ಹಗಲು, ರಾತ್ರಿ ನಿದ್ದೆ ಬಾರದಂತೆ ಮಾಡುತ್ತಿದ್ದಾನಂತೆ.
ಶ್ರುತಿಗೆ ಇಷ್ಟೆಲ್ಲಾ ಹಿಂಸೆ ಕೊಡುತ್ತಿರುವವರು ಯಾರಿರಬಹುದು ಎಂದು ಊಹಿಸಿಕೊಳ್ಳುತ್ತಿದ್ದೀರಾ? ಗಾಬರಿ ಬೀಳುವಂತದ್ದೇನಿಲ್ಲ! ಆ ಸ್ನೇಹಿತನ ಹೆಸರು ಜೆಟ್ಲ್ಯಾಗ್. ಶ್ರುತಿ ಹಾಸನ್ ಯಾವಾಗ ವಿಮಾನದಲ್ಲಿ ಪ್ರಯಾಣಿಸಿದರೂ ಜೆಟ್ಲ್ಯಾಗ್ ಸಮಸ್ಯೆಯಿಂದ ನರಳುತ್ತಾರಂತೆ.
ಮೊನ್ನೆಯವರೆಗೂ ಈ ನೋವು ಸ್ವಲ್ಪ ಕಡಿಮೆಯಾಗಿದೆ ಎಂದುಕೊಂಡರೆ ಈಗ ನಿದ್ದೆ ಇಲ್ಲದಂತೆ ಮಾಡುತ್ತಿದೆ ಎಂದು ಟ್ವಿಟ್ಟರ್ನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಶ್ರುತಿ ಹಾಸನ್ ಟಾಲಿವುಡ್ ಹೀರೋ ಪವನ್ ಕಲ್ಯಾನ್ ಜತೆಗೆ ಕಾಟಮರಾಯುಡು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.