ಅದ್ಧೂರಿ ಸಂಭ್ರಮದೊಂದಿಗೆ ಪ್ರಾರಂಭವಾದ ಸೂಪರ್ ಜೋಡಿ – 2 ಈ ವಾರ ಅದ್ಭುತ ದಾಖಲೆಯನ್ನು ನಿರ್ಮಿಸಲು ದಾಪುಗಾಲು ಹಾಕಿದೆ. ಕಿರುತೆರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ “ಫ್ಲ್ಯಾಶ್ ಮಾಬ್” ಮಾಡುವುದರ ಮೂಲಕ ಎಲ್ಲರ ಗಮನ ಸೆಳದಿದೆ. ಬೆಂಗಳೂರಿನ ಮಂತ್ರಿಸ್ಕ್ವೇರ್‌ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವೀಕ್ಷಕರ ಮುಂದೆ ಸೂಪರ್ ಜೋಡಿಗಳು ನೃತ್ಯ ಮತ್ತು ಹಾಡುಗಳನ್ನು ಹಾಡಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿ ಮಾಡಿದರು.
ನೈಜೇರಿಯಾದ ಆಡೋ ಅಬ್ದುಲ್ಲಾ “ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು” ಹಾಡನ್ನು ಹಾಡಿದರೆ, ಸೌಮ್ಯಾ ಬೆಲ್ಲಿ ಡ್ಯಾನ್ಸ್ ಮಾಡಿದರು. ಅಮೃತವರ್ಷಿಣಿಯ ವರ್ಷಾ, ಹರಹರ ಮಹಾದೇವದ ಸತಿ, ಸೈ ಡ್ಯಾನ್ಸ್‍ನ ಸೌಮ್ಯಾ ಜೋಡಿಗಳು ನೆರದ ಜನರ ಸಮ್ಮೂಖದಲ್ಲಿ ಒಂದಿಷ್ಟು ಸ್ಟೇಪ್‍ನ್ನು ಹಾಕಿ ಎಲ್ಲರನ್ನು ರಂಜಿಸಿದರು.
ನಿರೂಪಕ ಅಕುಲ್ ಬಾಲಾಜಿ ಸೂಪರ್ ಜೋಡಿ – 2 ಟೈಟಲ್ ಟ್ರ್ಯಾಕ್ ಗೆ ಡ್ಯಾನ್ಸ್ ಮುಖಾಂತರ ಎಂಟ್ರಿಕೊಟ್ಟು ಸೇರಿದ್ದ ಸಭಿಕರನ್ನು ತಮ್ಮ ಮಾತಿನ ವರಸೆಯಿಂದ ಗಮನಸೆಳೆದರು. ಈ ವಾರ ಸೂಪರ್ ಜೋಡಿ – 2ಯಲ್ಲಿ ಡಬಲ್ ಧಮಾಕಾ ಅಂತನೇ ಹೇಳಬಹುದು. ಒಂದಡೆ “ಫ್ಯಾಶ್ ಮಾಬ್” ಆದರೆ ಇನ್ನೊಂದೆಡೆ ಸಂಕ್ರಾಂತಿಯ ಸಂಭ್ರಮ.
ಎಳ್ಳು-ಬೆಲ್ಲದ ಸುಗ್ಗಿ ಸಂಭ್ರಮದೊಂದಿಗೆ ಹಳ್ಳಿ ಸೊಗಡಿನ ಸಂಪ್ರದಾಯಕ ಡೊಳ್ಳು ಕುಣಿತಗಳ ಮೂಲಕ, ಜೋಡಿಗಳು ಅದ್ಧೂರಿಯಾಗಿ ಆಖಾಡಕ್ಕೆ ಏಂಟ್ರಿ ಕೊಟ್ರು, ಹುಚ್ಚವೆಂಕಟ್ ಅವರು ಜೋಡಿಗಳಿಗೆ ಹಬ್ಬದ ವಿಶೇಷವಾಗಿ ಅಕ್ಕ-ತಂಗಿಯರಿಗೆ, ಉಡುಗೊರೆ ಕೊಟ್ಟು ಆಶೀರ್ವಾದ ಮಾಡಿದರು.
ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲು ಕನ್ನಡದ ಸಿನಿಮಾ ಸ್ಟಾರ್‌ಗಳು ಆಗಮಿಸಿ ಮತ್ತಷ್ಟು ಮೆರಗನ್ನು ನೀಡಿದರು. “ಲೀ” ಚಿತ್ರತಂಡದಿಂದ ಸುಮಂತ ಶೈಲೆಂದ್ರ, ನಭಾ ನಟೇಶ್, ಸ್ನೇಹಾ, ಕಾಮಿಡಿಕಿಂಗ್ ಚಿಕ್ಕಣ್ಣ ಸೂಪರ್ ಜೋಡಿ ಸೆಟ್‍ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ್ರೆ, “ಬ್ಯೂಟಿಪುಲ್ ಮನಸುಗಳು”ಚಿತ್ರದ ನಾಯಕ ನೀನಾಸಂ ಸತೀಶ್, ಅಕುಲ್ ಜೊತೆ ಕಿಕ್ ಕೊಟ್ರೆ, ಶೃತಿಹರಿಹರನ್ ಮಾತಿನಲ್ಲೇ ಮೂಡಿ ಮಾಡಿ ಡಬಲ್ ಧಮಾಕ ಸೃಷ್ಟಿಸಿದರು.
ಕರುನಾಡ ವೀಕ್ಷಕರಿಗೆ ಒಟ್ಟಾರೆ ಈ ವಾರ ಡಬಲ್ ಧಮಾಕ ಡಬಲ್ ಖುಷಿಯನ್ನು ಸೂಪರ್ ಜೋಡಿ ನೀಡಲಿದೆ. ಸಂಕ್ರಾಂತಿಯ ಸಂಭ್ರಮ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿಬರಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.