Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ ದಂಪತಿ

ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ ದಂಪತಿ
ಮುಂಬೈ , ಮಂಗಳವಾರ, 19 ಅಕ್ಟೋಬರ್ 2021 (16:59 IST)
ಮುಂಬೈ: ನೀಲಿ ಚಿತ್ರಗಳ ನಿರ್ಮಾಣ ಆರೋಪದಲ್ಲಿ ಬಂಧನಕ್ಕೊಳಗಾಗಿ ಈಗ ಜಾಮೀನಿನ ಮೇಲೆ ಹೊರಬಂದಿರುವ ಉದ್ಯಮಿ ರಾಜ್ ಕುಂದ್ರಾ ಮತ್ತು ನಟಿ ಶಿಲ್ಪಾ ಶೆಟ್ಟಿ ದಂಪತಿ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.


ವಾರದ ಹಿಂದೆ ಶಿಲ್ಪಾ ದಂಪತಿ ತನಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆಂದು ಶೆರ್ಲಿನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

ಇದೀಗ ಶಿಲ್ಪಾ ದಂಪತಿ ಶೆರ್ಲಿನ್ ಗೆ ಸಾರ್ವಜನಿಕವಾಗಿ ಮಾನಹಾನಿಯಾಗುವಂತೆ ಹೇಳಿಕೆ ನೀಡಿದ್ದಕ್ಕೆ 50 ಕೋಟಿ ರೂ. ಮಾನನಷ್ಟ ಪರಿಹಾರ ಮತ್ತು ಕ್ಷಮೆ ಯಾಚಿಸುವಂತೆ ಕೋರಿ ನೋಟಿಸ್ ಜಾರಿ ಮಾಡಿಸಿದ್ದಾರೆ. ರಾಜ್ ಕುಂದ್ರಾ ಜೈಲಿನಲ್ಲಿದ್ದಾಗ ಶೆರ್ಲಿನ್ ಕುಂದ್ರಾ ಮೇಲೆ ಹಲವು ಆರೋಪಗಳನ್ನು ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

‘ಸಲಗ’ ಒಟಿಟಿ ರಿಲೀಸ್ ಬಗ್ಗೆ ದುನಿಯಾ ವಿಜಯ್ ಸ್ಪಷ್ಟನೆ