Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಪಿಲ್ ಶರ್ಮಾ ಮೇಲೆ ನಟ ಶತ್ರುಘ್ನ ಸಿನ್ಹಾ ಕೋಪಗೊಂಡಿದ್ಯಾಕೆ?

ಕಪಿಲ್ ಶರ್ಮಾ ಮೇಲೆ ನಟ ಶತ್ರುಘ್ನ ಸಿನ್ಹಾ ಕೋಪಗೊಂಡಿದ್ಯಾಕೆ?
ಮುಂಬೈ , ಶನಿವಾರ, 11 ಆಗಸ್ಟ್ 2018 (16:18 IST)
ಮುಂಬೈ : ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರ ವಿರುದ್ಧ ಖ್ಯಾತ ನಟ ಶತ್ರುಘ್ನ ಸಿನ್ಹಾ ಅವರು  ಕೋಪಗೊಂಡಿದ್ದಾರೆ.


ಕಪಿಲ್ ಶರ್ಮಾ ತಮ್ಮ ಶೋಗಳಲ್ಲಿ ಶತ್ರುಘ್ನ ಸಿನ್ಹಾರ ಹಾವ, ಭಾವದಿಂದ ಎಲ್ಲರ ಮನ ಗೆದ್ದಿದ್ದಾರೆ. ಅಲ್ಲದೆ ಕೆಲವೊಮ್ಮೆ ಅವರ ರೀತಿ ಡೈಲಾಗ್ ಹೇಳಿ ರಂಜಿಸಿದ್ದಾರೆ. ಆದರೆ ಅದ್ಯಾಕೋ ನಟ ಶತ್ರುಘ್ನ ಸಿನ್ಹಾ ಅವರಿಗೆ ಕಪಿಲ್ ಶರ್ಮಾ ತಮ್ಮ ಸ್ಟೈಲ್ ನ್ನು ಅನುಕರಣೆ ಮಾಡುವುದು ಇಷ್ಟವಾಗಿಲ್ಲವಂತೆ. ಕಪಿಲ್ ಶರ್ಮಾ ಅನುಕರಣೆ ಮಾಡುವ ಚೌಕಟ್ಟನ್ನೂ ಮೀರಿ ನಡೆದಿದ್ದು, ತನಗೆ ನೋವು ತಂದಿದೆ ಎಂದು ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.


ಕಪಿಲ್ ಶೋ ವೇಳೆ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ, ತಂದೆಯ ನಕಲು ಮಾಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ನಟ ಕಪಿಲ್ ಶರ್ಮಾ ಅದನ್ನೇ ಮುಂದುವರಿಸಿದ್ದಾರೆ. ಇದು ನಟ ಶತ್ರುಘ್ನ ಸಿನ್ಹಾ ಅವರ ಕೋಪಕ್ಕೆ ಕಾರಣವಾಗಿದೆ. ಲತಾ ಮಂಗೇಶ್ಕರ್, ಅಮಿತಾಬ್ ಬಚ್ಚನ್ ರ ಅನುಕರಣೆಯನ್ನು ಅಭಿಮಾನಿಗಳು ಮಾಡುತ್ತಾರೆ. ತಮ್ಮ ಹಾವ ಭಾವಗಳನ್ನು ನೋಡಿ ಸ್ಟಾರ್ ಗಳೂ ಮಜಾ ಪಡೆಯುತ್ತಾರೆ. ಆದ್ರೆ, ಅನುಕರಣೆ ಒಂದು ಚೌಕಟ್ಟಿನಲ್ಲಿರಬೇಕು ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಮದುವೆಯ ಸಂಭ್ರಮದಲ್ಲಿ ತೇಲಾಡಲಿದ್ದಾರಂತೆ ನಟ ಸಲ್ಮಾನ್ ಖಾನ್