ಮುಂಬೈ: ನಟಿಯರು ತಮ್ಮ ವೃತ್ತಿ ಜೀವನದಲ್ಲಿ ಎಂತೆಂತಹಾ ಸಂಕಷ್ಟಕ್ಕೆ ಸಿಲುಕುತ್ತಾರೆ ಎಂಬುದರ ಬಗ್ಗೆ ಆಗಾಗ ಆಪಾದನೆಗಳು ಬರುತ್ತಲೇ ಇರುತ್ತವೆ. ಇದೀಗ ಹಾಟ್ ನಟಿ ಮಲ್ಲಿಕಾ ಶೆರಾವತ್ ಕಪಿಲ್ ಶರ್ಮಾ ಶೋನಲ್ಲಿ ಅಂತಹದ್ದೇ ಒಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಕಪಿಲ್ ಶರ್ಮಾ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಲ್ಲಿಕಾ ಶೆರವಾತ್ ನಿರ್ಮಾಪಕರೊಬ್ಬರು ತನ್ನ ಸೊಂಟದ ಮೇಲೆ ಮೊಟ್ಟೆ ಫ್ರೈ ಮಾಡುವ ಐಡಿಯಾ ನೀಡಿದ್ದ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
‘ನಾನು ಹಾಟ್ ಎಂದು ತೋರಿಸಿಕೊಡಲು ನೃತ್ಯವೊಂದರಲ್ಲಿ ನನ್ನ ಸೊಂಟದ ಮೇಲೆ ಮೊಟ್ಟೆ ಫ್ರೈ ಮಾಡುವ ದೃಶ್ಯ ಸಂಯೋಜಿಸಲು ಕೊರಿಯಾಗ್ರಫರ್ ಗೆ ಆ ನಿರ್ಮಾಪಕರು ಸೂಚಿಸಿದ್ದರು. ನನ್ನ ಬಳಿ ಈ ಐಡಿಯಾ ಹೇಳಿದಾಗ ನಿಜಕ್ಕೂ ಶಾಕ್ ಆದೆ. ಆದರೆ ಕೊನೆಗೂ ನಾನು ಆ ದೃಶ್ಯ ಮಾಡಲಿಲ್ಲ’ ಎಂದು ಮಲ್ಲಿಕಾ ಬಹಿರಂಗಪಡಿಸಿದ್ದಾರೆ. ಮಹಿಳೆಯನ್ನು ಸಿನಿಮಾದಲ್ಲಿ ಈ ಮಟ್ಟಿಗೆ ನಡೆಸಿಕೊಳ್ಳುತ್ತಾರಾ ಎಂದು ಮಲ್ಲಿಕಾ ಮಾತು ಕೇಳಿ ವೀಕ್ಷಕರಿಗೆ ಗಾಬರಿಯಾಗಿದೆ.