ಮುಂಬೈ: ಟೆನಿಸ್ ತಾರೆ ಸಾನಿಯಾ ಮಿರ್ಜಾರ ಒಳ ಉಡುಪು ಕಾಣುವಂತಹ ಫೋಟೋವನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೆ ಹಿಂಬಾಲಕರು ತಕ್ಕ ಮಂಗಳಾರತಿ ಮಾಡಿದ್ದಾರೆ.
ತಮ್ಮ ಕಿರು ಚಿತ್ರ ಮೇರಿ ಬೇಟಿ ಸನ್ನಿ ಲಿಯೋನ್ ಬನ್ ನಾ ಚಾಹ್ತೀ ಹೈಯ ಪ್ರಚಾರಕ್ಕಾಗಿ ರಾಮ್ ಗೋಪಾಲ್ ವರ್ಮಾ ಉದಾಹರಣೆಯೊಂದನ್ನು ನೀಡುತ್ತಾ ಸಾನಿಯಾರ ಅಶ್ಲೀಲ ಭಂಗಿಯ ಫೋಟೋ ಪ್ರಕಟಿಸಿದ್ದರು. ಇದಕ್ಕೀಗ ವ್ಯಾಪಕ ಟೀಕೆ ವ್ಯಕ್ತವಾಗಿದೆ.
‘ನಿಮಗೆ ನಾಚಿಕೆಯಾಗಬೇಕು. ನಿಮಗೂ ಅಕ್ಕ-ತಂಗಿಯರು ಇಲ್ವಾ? ಅಥವಾ ಹೆತ್ತಮ್ಮನಿಲ್ವಾ? ಇಂತಹ ಪೋಸ್ಟ್ ಪ್ರಕಟಿಸುವ ಮೊದಲು ಎರಡು ಬಾರಿ ಯೋಚಿಸಿ’ ಎಂದೆಲ್ಲಾ ವಾಚಮಗೋಚರವಾಗಿ ಟ್ವಿಟರಿಗರು ವಾಗ್ದಾಳಿ ನಡೆಸಿದ್ದಾರೆ. ಆದರೆ ಇಷ್ಟೆಲ್ಲಾ ಆದರೂ ರಾಮ್ ಗೋಪಾಲ್ ವರ್ಮಾ ಮಾತ್ರ ತಮ್ಮ ಪೋಸ್ಟ್ ಡಿಲೀಟ್ ಮಾಡುವ ಗೋಜಿಗೇ ಹೋಗಿಲ್ಲ.