Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಂದ ಆಫರ್ ಗಳನ್ನು ರಾಧಿಕಾ ಚೇತನ್ ನಿರಾಕರಿಸುತ್ತಿರೋದ್ಯಾಕೆ?

ಬಂದ ಆಫರ್ ಗಳನ್ನು ರಾಧಿಕಾ ಚೇತನ್ ನಿರಾಕರಿಸುತ್ತಿರೋದ್ಯಾಕೆ?
ಬೆಂಗಳೂರು , ಗುರುವಾರ, 18 ಆಗಸ್ಟ್ 2016 (09:29 IST)
ತನ್ನ ಮೊದಲ ಸಿನಿಮಾದಲ್ಲೇ ತಾನೊಬ್ಬ ಉತ್ತಮ ನಟಿ ಅನ್ನೋದನ್ನು ತೋರಿಸಿಕೊಟ್ಟವರು ನಟಿ ರಾಧಿಕಾ ಚೇತನ್. ತನ್ನ ಪಾತ್ರಕ್ಕೆ ಅಷ್ಟು ಸುಂದರವಾಗಿ ಜೀವ ತುಂಬಿದ್ದರು ಅವರು. ರಾದಿಕಾ ಚೇತನ್ ಅಭಿನಯ ನೋಡಿದ ಮಂದಿ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಭರಪೂರ ಅವಕಾಶಗಳು ಬರುತ್ತವೆ ಅಂದುಕೊಂಡಿದ್ದರು.ಆದ್ರೆ ರಾಧಿಕಾ ಮಾತ್ರ  ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಲೇ ಇಲ್ಲ.

ಇನ್ನು ರಂಗಿತರಂಗ ಸಿನಿಮಾದ ಬಳಿಕ ರಾಧಿಕಾ ಅವರು ಅಭಿನಯಿಸಿದ್ದು ಯೂ ಟರ್ನ್  ಸಿನಿಮಾದಲ್ಲಿ. ಅಲ್ಲೂ ತಮ್ಮ ಅಭಿನಯದ ಮೂಲಕ ಕಮಾಲ್ ಮಾಡಿದ್ರು.ಆದ್ರೆ ಆ ಬಳಿಕ ಬಂದ ಅನೇಕ ಆಫರ್ ಗಳನ್ನು ಅವರು ನಿರಾಕರಿಸಿದ್ರಂತೆ. ಯಾಕೆ ಅನ್ನೋದನ್ನು ಅವರೇ ಹೇಳಿದ್ದಾರೆ. ನನಗೆ ಒಂದೇ ರೀತಿಯ ಪಾತ್ರಗಳು ಬಂದವು.

ಹೆಚ್ಚಿನ ಸಿನಿಮಾಗಳು ಅದೇ ಹಾರರ್ ಕಥೆಗಳಾಗಿದ್ವು. ಈಗಾಗಲೇ ನಾನು ಆ ರೀತಿಯ ಸಿನಿಮಾ ಮಾಡಿದ್ದೇನೆ. ಮತ್ತೆ ಮತ್ತೆ ಹಾರರ್ ಸಿನಿಮಾಗಳಲ್ಲಿ ನಟಿಸೋದು ಬೇಡ ಅನ್ನೋ ಕಾರಣಕ್ಕೆ ಹಲವು ಆಫರ್‌ಗಳನ್ನ ರಿಜೆಕ್ಟ್ ಮಾಡಿದೆ ಅಂತಾ ಅವರು ಹೇಳಿದ್ದಾರೆ.

ಇನ್ನು ಸದ್ಯ ರಾಧಿಕಾ ಚೇತನ್ ಅವರು ಬಿಬಿ5 ಅನ್ನೋ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರವನ್ನು ಜನಾರ್ದನ್ ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಮೈಸೂರಿನ ಪೂರ್ಣಚಂದ್ರ, ರಾಜೇಶ್ ನಟರಂಗ ಸೇರಿದಂತೆ ಅನೇಕರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಈ ಸಿನಿಮಾದಲ್ಲಿ ರಾಧಿಕಾ ಅವರದ್ದು ವಿಭಿನ್ನ ಪಾತ್ರವಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದು ನನ್ನದಲ್ವೋ ಅದು ನನಗೆ ಬೇಡ.. ಕೆಚ್ಚಿನ ಮಾತುಗಳನ್ನಾಡಿದ ಸುದೀಪ್