Select Your Language

Notifications

webdunia
webdunia
webdunia
webdunia

ಕಾಲೇಜಿಗೆ ತೆರಳಲಿರುವ 'ರಂಗಿತರಂಗ' ಖ್ಯಾತಿಯ ನಟಿ ರಾಧಿಕಾ ಚೇತನ್

ರಾಧಿಕಾ
'ರಂಗಿತರಂಗ' ಖ್ಯಾತಿಯ ನಟಿ ರಾಧಿಕಾ ಮತ್ತೆ ಕಾಲೇಜಿಗೆ ತೆರಳಲಿದ್ದಾರೆ. ಅದು ರಿಯಲ್ ಲೈಫಲ್ಲಿ ಅಲ್ಲ, ರೀಲ್ ಲೈಫಲ್ಲಿ ರಾಧಿಕಾ ಚೇತನ್ ಕಾಲೇಜು ಹುಡುಗಿಯಾಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. 'ಯೂ ಟರ್ನ್' ಚಿತ್ರದಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಬಹುದಿನದ ಬಳಿಕ ಮತ್ತೆ ಎಂಟ್ರಿ ನೀಡುತ್ತಿದ್ದಾರೆ. ಮುಂಬರುವ ಚಿತ್ರ 'ಬಿಬಿ5' ಶೂಟಿಂಗ್‌ನಲ್ಲಿ ರಾಧಿಕಾ ಪಾಲ್ಗೊಳ್ಳಲಿದ್ದಾರೆ. 

ತಮ್ಮ ಮುಂಬರುವ ಚಿತ್ರದ ಬಗ್ಗೆ ಹಂಚಿಕೊಂಡಿರುವ ರಾಧಿಕಾ ಚೇತನ್, ನಾನು ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ನಟಿಸುತ್ತಿದ್ದೇನೆ. ಈ ಚಿತ್ರವನ್ನು ಜನಾರ್ಧನ ನಾಗರಾಜರಾವ್ ನಿರ್ದೇಶನ ಮಾಡುತ್ತಿದ್ದು, ಲೀಡ್ ರೋಲ್‌ನಲ್ಲಿ ಪೂರ್ಣಚಂದ್ರ ಮೈಸೂರು ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಚಿತ್ರದಲ್ಲಿ ರಾಜೇಶ್ ನಟರಂಗ ಹಾಗೂ ಗಿರಿರಾಜ್ ಬಿಎಮ್ ಚಿತ್ರದಲ್ಲಿ ಮಿಂಚಲಿದ್ದಾರೆ ಎಂದು ರಾಧಿಕಾ ತಿಳಿಸಿದ್ದಾರೆ. 
 
ವಿಭಿನ್ನ ಕಥಾ ಹಂದರವನ್ನು ಒಳಗೊಂಡಿದ್ದ ಹೊಸಬರ 'ರಂಗಿತರಂಗ' ಚಿತ್ರ ಕನ್ನಡದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿತ್ತು. ಈ ಚಿತ್ರದಲ್ಲಿ ನಟಿ ರಾಧಿಕಾ ಚೇತನ್ ನಟಿಸಿದ್ದರು. ಅದಾದ ಬಳಿಕ ನಿರ್ದೇಶಕ ಪವನ್ ಅವರ 'ಯೂ ಟರ್ನ್' ಎಂಬ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದರು. 

'ರಂಗಿತರಂಗ', 'ಯೂ ಟರ್ನ್' ಚಿತ್ರಗಳ ನಂತರ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ರಾಧಿಕಾ ಚೇತನ್ ಮತ್ತೊಮ್ಮೆ ತೆರೆ ಮೇಲೆ ಮಿಂಚುತ್ತಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಹೊಸ ನಿವಾಸಕ್ಕೆ 'ಕೆಂಡಸಂಪಿಗೆ' ಎಂದು ಹೆಸರಿಟ್ಟ ನಟಿ ಮಾನ್ವಿತಾ