ಅಕ್ಷಯ್ ಕುಮಾರ್ ಅವರೊಂದಿಗೆ ಮೊದಲ ಬಾರಿ ಪರದೆಯನ್ನು ಹಂಚಿಕೊಳ್ಳುತ್ತಿರುವ ಪರಿಣಿತಿ ಚೋಪ್ರಾ ತಾವು 'ಕೇಸರಿ' ಚಿತ್ರದಲ್ಲಿ ಸೂಪರ್ಸ್ಟಾರ್ ಅವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಅನುರಾಗ್ ಸಿಂಗ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹವಿಲ್ದಾರ್ ಇಶಾರ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಪರಿಣಿತಿ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ನಾನು ಅವರೊಂದಿಗೆ ಕೆಲಸ ಮಾಡಲು ಬಹಳ ಉತ್ಸುಕಳಾಗಿದ್ದೇನೆ. ಮೂರು ದಿನಗಳಲ್ಲಿ ನಾನು 'ನಮಸ್ತೆ ಇಂಗ್ಲೆಂಡ್' ಶೂಟಿಂಗ್ಗೆ ತೆರಳಲಿದ್ದೇನೆ. ಆದರೆ ಕೇಸರಿ ಚಿತ್ರಕ್ಕಾಗಿ ನಾನು ಹೆಚ್ಚು ಉತ್ಸುಕಳಾಗಿದ್ದೇನೆ" ಎಂದು ಪರಿಣಿತಿ ಚೋಪ್ರಾ ತಮ್ಮ ಸಂತೋಷವನ್ನು ಹಂಚಿಕೊಂಡರು.
ಪರಿಣಿತಿ ತಮ್ಮ ಮಾತನ್ನು ಮುಂದುವರಿಸುತ್ತಾ, "ತುಂಬಾ ದಿನದಿಂದ ಅಕ್ಷಯ್ ಕುಮಾರ್ ಅವರೊಂದಿಗೆ ಅಭಿನಯಿಸುವುದು ನನ್ನ ಕನಸಾಗಿತ್ತು. ಅವರು ಪಂಜಾಬಿ ಹಾಗೂ ನಾನೂ ಸಹ ಪಂಜಾಬಿಯವಳು ಮತ್ತು ನಾವಿಬ್ಬರೂ ಪಂಜಾಬಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇವೆ. ಈ ಚಿತ್ರದ ಶೂಟಿಂಗ್ ಅನ್ನು ಆರಂಭಿಸಲು ನಾನು ತುಂಬಾ ಉತ್ಸುಕಳಾಗಿದ್ದೇನೆ" ಎಂದು ಕಾರ್ಯಕ್ರಮವೊಂದರಲ್ಲಿ ವರದಿಗಾರರಿಗೆ ಹೇಳಿದ್ದಾರೆ. ಚಿತ್ರದಲ್ಲಿನ ಅಕ್ಷಯ್ ಕುಮಾರ್ ಅವರ ಲುಕ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿನ ಅವರ ಲುಕ್ ಕುರಿತು ಕೇಳಿದಾಗ ಚಿತ್ರ ತಂಡ ಅದನ್ನು ಯಾವಾಗ ಅನಾವರಣಗೊಳಿಸಬೇಕು ಎನ್ನುವುದನ್ನು ನಿರ್ಧರಿಸಲಿದೆ ಎಂದು ಹೇಳಿದರು.
ಇದರೊಂದಿಗೆ, ಪರಿಣಿತಿ ಅರ್ಜುನ್ ಕಪೂರ್ ಅವರೊಂದಿಗೆ 'ನಮಸ್ತೆ ಇಂಗ್ಲೆಂಡ್' ಚಿತ್ರದ ಶೂಟಿಂಗ್ನಲ್ಲಿ ನಿರತರಾಗಿದ್ದಾರೆ. "ದುರದೃಷ್ಟವಶಾತ್ ಏಕಕಾಲದಲ್ಲಿ ಇದನ್ನು ಮಾಡಬೇಕು, ಚಿತ್ರೀಕರಣದ ದಿನಾಂಕಗಳನ್ನು ಹಾಗೆ ಯೋಜಿಸಲಾಗಿದೆ. ಆದ್ದರಿಂದ 'ಕೇಸರಿ' ಗಾಗಿ ಅಮೃತಸರದಲ್ಲಿ ಮತ್ತು 'ನಮಸ್ತೆ ಇಂಗ್ಲೆಂಡ್' ಗಾಗಿ ಇಂಗ್ಲೆಂಡ್ನಲ್ಲಿ ನಾನು ಚಿತ್ರೀಕರಣದಲ್ಲಿರಲಿದ್ದೇನೆ" ಎಂದು 'ಕೇಸರಿ' ಮತ್ತು 'ನಮಸ್ತೆ ಇಂಗ್ಲೆಂಡ್' ಚಿತ್ರಗಳಲ್ಲಿ ಒಟ್ಟಿಗೆ ಒಂದೇ ಸಮಯದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಬೇಕಾದ ತಮ್ಮ ಅನಿವಾರ್ಯತೆಯನ್ನು ಹೇಳಿಕೊಂಡರು.
'ಬ್ರದರ್ಸ್' ನಂತರ 'ಕೇಸರಿ' ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಒಂದಾಗಿದ್ದಾರೆ. ಈ ಚಿತ್ರವು ಸಾರಗರ್ಹಿ ಕದನ ಹಾಗೂ ಐತಿಹಾಸಿಕ ನಾಟಕವನ್ನು ಆಧರಿಸಿದ್ದು ಮುಂದಿನ ವರ್ಷ ಹೋಳಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.