ಮುಂಬೈ: ಭಾರತೀಯ ವಾಯು ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬಳಿಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ‘ಜೈ ಹಿಂದ್’ ಎಂದು ಟ್ವೀಟ್ ಮಾಡಿದ್ದು ಇದೀಗ ಅವರಿಗೇ ಮುಳುವಾಗಿದೆ.
ಯೂನಿಸೆಫ್ ನ ರಾಯಭಾರಿಯಾಗಿರುವ ಪ್ರಿಯಾಂಕಾ ಈ ರೀತಿ ಟ್ವೀಟ್ ಮಾಡಿದ್ದು ತಪ್ಪು ಎಂದು ಪಾಕಿಸ್ತಾನದ ವ್ಯಕ್ತಿಯೊಬ್ಬರು ಪ್ರಿಯಾಂಕಾ ವಿರುದ್ಧ ದೂರು ನೀಡಿದ್ದಾರೆ.
‘ಎರಡು ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳ ನಡುವಿನ ಯುದ್ಧದಿಂದ ಸಾವು ನೋವು ಸಂಭವಿಸುತ್ತದೆ. ಯೂನಿಸೆಫ್ ನ ರಾಯಭಾರಿಯಾಗಿ ಇಂತಹ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ತಟಸ್ಥವಾಗಿರಬೇಕು. ಆದರೆ ಪಾಕ್ ವಾಯು ಸೀಮೆ ಉಲ್ಲಂಘಿಸಿದ ಭಾರತೀಯ ಸೇನೆಯ ಪರವಾಗಿ ಪ್ರಿಯಾಂಕಾ ಟ್ವೀಟ್ ಮಾಡಿದ್ದಾರೆ. ಹೀಗಾಗಿ ಅವರು ಈ ಸ್ಥಾನಕ್ಕೆ ಅರ್ಹರಲ್ಲ’ ಎಂದು ಪಾಕ್ ನೆಟ್ಟಿಗರು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.