ಮುಂಬೈ: ಮಲೈಕಾ ಅರೋರಾ ಮತ್ತು ಪತಿ ಅರ್ಬಾಜ್ ಖಾನ್ ವೈವಾಹಿಕ ಜೀವನ ಮುರಿದು ಬಿದ್ದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಇದೀಗ ಅವರ ಪುತ್ರ ಅರ್ಹಾನ್ ನ 14 ನೇ ಜನುಮ ದಿನಕ್ಕಾಗಿ ಈ ಜೋಡಿ ಜತೆಯಲ್ಲೇ ಕುಳಿತು ಪಾರ್ಟಿ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.
ಪುತ್ರನ ಹುಟ್ಟುಹಬ್ಬದ ನಿಮಿತ್ತ ಮಲೈಕಾ ಪಾರ್ಟಿ ಆಯೋಜಿಸಿದ್ದರು. ವಿಶೇಷವೆಂದರೆ ಈ ಪಾರ್ಟಿಗೆ ಮಲೈಕಾ ಮತ್ತು ಅರ್ಬಾಜ್ ಕುಟುಂಬದವರೆಲ್ಲಾ ಆಗಮಿಸಿದ್ದರು. ಸಂಭ್ರಮದಲ್ಲಿ ಪಾಲ್ಗೊಂಡವರಲ್ಲಿ ಅರ್ಬಾಜ್ ಸಹೋದರ ಸಲ್ಮಾನ್ ಖಾನ್, ಸಲೀಂ ಖಾನ್ ದಂಪತಿ, ಸಲ್ಮಾನ್ ಸಹೋದರಿ ಅಲ್ವಿರಾ, ಸಹೋದರ ಸೊಹೈಲ್ ಖಾನ್, ಮಲೈಕಾ ಸಹೋದರಿ ಅಮೃತಾ ಸೇರಿದಂತೆ ಕುಟುಂಬದ ಆಪ್ತೇಷ್ಟರೆಲ್ಲಾ ಸೇರಿದ್ದರು.
ಈ ಸಂದರ್ಭದಲ್ಲಿ ಮಲೈಕಾ ಮತ್ತು ಅರ್ಬಾಜ್ ಒಟ್ಟಿಗೇ ನಿಂತು ತೆಗೆಸಿಕೊಂಡ ಫೋಟೋಗಳನ್ನು ಸ್ವತಃ ಅಮೃತಾ ಅರೋರಾ ಪ್ರಕಟಿಸಿದ್ದಾರೆ. ಅಂತೂ ಪಾರ್ಟಿ ನೆಪದಲ್ಲಾದರೂ ಈ ಜೋಡಿ ಒಂದಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ