ಮುಂಬೈ: ಇತ್ತೀಚೆಗೆ ಬಾಲಿವುಡ್ ನಟ ರಣಬೀರ್ ಕಪೂರ್ ಪಾಕಿಸ್ತಾನ ಬೆಡಗಿ ಮಹಿರಾ ಖಾನ್ ಜತೆಗೆ ಸಿಗರೇಟು ಸೇದುತ್ತಿರುವ ಖಾಸಗಿ ಫೋಟೋಗಳು ಲೀಕ್ ಆಗಿ ಭಾರೀ ಗುಲ್ಲೆದ್ದಿತ್ತು. ಇದೀಗ ಸ್ವತಃ ಮಹಿರಾ ಅದರ ಬಗ್ಗೆ ಕಾಮೆಂಟ್ ಮಾಡಿದ್ದಾಳೆ.
ಪಾಕ್ ಮೂಲದ ನಟಿ ಅಲ್ಲಿನ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದು, ‘ಪ್ರಾಯಕ್ಕೆ ಬಂದ ಒಬ್ಬ ಹುಡುಗ, ಹುಡುಗಿ ಜತೆಯಾಗಿ ಸುತ್ತಾಡುವುದು ಸರ್ವೇ ಸಾಮಾನ್ಯ. ಅದರಲ್ಲಿ ವಿವಾದ ಮಾಡುವಂತದ್ದು ಏನಿದೆ? ಅಷ್ಟಕ್ಕೂ ಇದು ನಮ್ಮ ವೈಯಕ್ತಿಕ ವಿಷಯ. ಇದರಲ್ಲಿ ಪ್ರಶ್ನೆ ಮಾಡುವುದೇನಿದೆ?’ ಎಂದು ಮಹಿರಾ ಖಾರವಾಗಿ ಪ್ರತಿಕ್ರಿಯಿಸಿದ್ದಾಳೆ.
ವಿವಾದವಾದ ಸಂದರ್ಭದಲ್ಲಿ ರಣಬೀರ್ ಪರ ತಂದೆ ರಿಷಿ ಕಪೂರ್ ಬ್ಯಾಟಿಂಗ್ ಮಾಡಿದ್ದರು. ಅವರಿಬ್ಬರಿಗೂ ಮದುವೆಯಾಗಿಲ್ಲ. ಹೊರಗಡೆ ಸುತ್ತಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಈ ವಿವಾದದಿಂದಾಗಿ ನೀವು ಪತ್ರಕರ್ತರು ಎಲ್ಲೆಲ್ಲೂ ಇರ್ತೀರಾ. ಇನ್ನು ಹುಷಾರಾಗಿರಬೇಕು ಎಂದು ಕಲಿತುಕೊಂಡೆ ಎಂದಿದ್ದಾಳೆ ಮಹಿರಾ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ