ಖ್ಯಾತ ಬಾಲಿವುಡ್ ನಟಿ ಕತ್ರೀನಾ ಕೈಫ್ ತಮ್ಮ ಆಹಾರ ರಹಸ್ಯವನ್ನು #FlirtWithYourCity ಅಭಿಯಾನದೊಂದಿಗೆ ಹಂಚಿಕೊಂಡರು. ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಟೈಮ್ಸ್ ಆಫ್ ಇಂಡಿಯಾವು ಅಭಿಯಾನವನ್ನು ನಡೆಸುತ್ತಿದೆ.
"ಆಹಾರ ಶೈಲಿಗಳ ಕುರಿತು ನೋಡುವುದಾದರೆ ಬೆಂಗಳೂರು ನಿಜಕ್ಕೂ ಒಂದು ಪ್ರಾಯೋಗಿಕವಾದ ನಗರ. ಅತ್ಯುತ್ತಮವಾದ ಸ್ಥಳೀಯ ಆಹಾರದಿಂದ ಹಿಡಿದು ಭಿನ್ನ ವಿಭಿನ್ನ ಶೈಲಿಯ ಪಂಚತಾರಾ ಶೈಲಿಯ ಆಹಾರಗಳು ಕೂಡಾ ಇಲ್ಲಿ ಲಭ್ಯವಾಗುತ್ತದೆ. ಉತ್ತಮ ದೋಸೆ, ಅಕ್ಕಿರೊಟ್ಟಿ ಅಥವಾ ಜೋಳದ ರೊಟ್ಟಿಯೊಂದಿಗೆ ಫಿಲ್ಟರ್ ಕಾಫಿ ಸೇವನೆಯು ನನ್ನ ಇಷ್ಟದ ಆಹಾರವೆಂದು ಬಾಲಿವುಡ್ ನಟಿ ಕತ್ರಿನಾ ಕೈಫ್ ಹೇಳಿದರು.
ಕತ್ರಿನಾ ಕೈಫ್ ವಿಭಿನ್ನವಾದ ಆಹಾರಗಳನ್ನು ಪ್ರಯತ್ನ ಮಾಡುವುದರಲ್ಲಿ ಮುಂದಾಗಿದ್ದು, ಈ ಅಭಿಯಾನದಲ್ಲಿ ತಮ್ಮ ಆಹಾರ ಶೈಲಿ ಮತ್ತು ವಿಧಾನಗಳ ಕುರಿತು ಮಾತನಾಡಿದರು.
"ನನಗೆ ಬೀದಿಬದಿಯಲ್ಲಿ ಲಭ್ಯವಾಗುವ ಆಹಾರಗಳೆಂದರೆ ಇಷ್ಟ. ಸ್ಥಳೀಯ ಬೀದಿ ಅಂಗಡಿಗಳಲ್ಲಿ ಲಭ್ಯವಾಗುವ ತಿನಿಸುಗಳನ್ನು ಯಾವ ಪ್ರಮಾಣದಲ್ಲಾದರೂ ನಾನು ತಿನ್ನಲು ಸಿದ್ಧ. ಬೆಂಗಳೂರಿನ ವಿವಿಪುರಂ ನಲ್ಲಿರುವ ಬೀದಿ ಆಹಾರ ಮಳಿಗೆಗಳಲ್ಲಿ ಆಹಾರ ಸೇವಿಸು ನಾನು ಉತ್ಸುಕಳಾಗಿರುತ್ತೇನೆ ಎಂದು ತಮ್ಮ ಇಷ್ಟದ ಆಹಾರ ಮಳಿಗೆಯ ಕುರಿತು ತಿಳಿಸಿದರು.
ಶಿಸ್ತು ಮತ್ತು ಫಿಟ್ನೆಸ್ ಫ್ರೀಕ್ ಆಗಿರುವ ಕತ್ರಿನಾ ಕೈಫ್ ಮುಂದುವರಿದು ಮಾತನಾಡುತ್ತಾ, ಬೆಂಗಳೂರು ತನ್ನ ಹಸಿರಿನಿಂದಲೇ ಹೆಸರಾಗಿದೆ. ಬೆಂಗಳೂರಿನಲ್ಲಿ ಹಸಿರನ್ನು ನಾಶ ಮಾಡಲಾಗುತ್ತಿದೆ ಎಂಬ ಮಾತುಗಳು ಕೆಲವೊಮ್ಮೆ ಕೇಳಿ ಬರುತ್ತದೆ. ಆದರೆ ಬೆಂಗಳೂರು ಇಂದಿಗೂ ಲಾಲ್ ಭಾಗ್ ಹಾಗು ಕಬ್ಬನ್ ಪಾರ್ಕ್ನಂೆತಹ ಹಸಿರಿನ ಲೋಕವನ್ನೇ ತನ್ನೊಳಗೆ ಇಟ್ಟುಕೊಂಡಿದೆ. ಈ ಸ್ಥಳಗಳಲ್ಲಿ ಜಾಗಿಂಗ್ ಹಾಗೂ ಯೋಗಾ ಮಾಡಲು ಅಥವಾ ತಮ್ಮ ಸಾಕುಪ್ರಾಣಿಗಳೊಂದಿಗೆ ನಡೆದಾಡಲು ಸೂಕ್ತ ಎಂದರು.
ಹಸಿರು ಹಾಗೂ ಪರಿಸರ ಪ್ರೇಮಿಯಾಗಿರುವ ಕತ್ರೀನಾ ಕೈಫ್, " ಬೆಂಗಳೂರಿನಲ್ಲಿರುವ ಸುಂದರವಾದ ಪಾರ್ಕ್ಗಗಳಲ್ಲಿ ಅಥವಾ ಕಂಠೀರಣ ಕ್ರಿಡಾಂಗಣದಲ್ಲಿ ಓಡಾಡಲು, ನಡೆದಾಡಲು ನನಗೆ ತುಂಬಾನೇ ಇಷ್ಟ. ಸ್ಟೇಡಿಯಂನಲ್ಲಿ ಪ್ರತೀ ದಿನ ಬೆಳಗ್ಗೆ ಹಲವಾರು ಮಂದಿ ತಮ್ಮ ದೈಹಿಕ ಆರೋಗ್ಯ ಕಾಪಾಡಿಕೊಳ್ಳು ನಡೆದಾಡುವುದನ್ನು ನಾವು ನೋಡುತ್ತಿರುತೇವೆ. ನನಗೂ ಅದರ ಭಾಗವಾಗಬೇಕೆಂಬ ಇಚ್ಛೆ ಇದೆ. ಇನ್ನು ಸೈಕ್ಲಿಂಗ್ ಕಡೆಗೂ ಜನರು ಹೆಚ್ಚಿನ ಗಮನ ನೀಡುತ್ತಿದ್ದಾರೆ. ನನಗೆ ಇವುಗಳೆಲ್ಲದರ ಭಾಗವಾಗುವ ಆಸಕ್ತಿಯಿದೆ ಎಂದು ಕತ್ರೀನಾ ಹೇಳಿದ್ದಾರೆ.